Advertisement
ಕರಾವಳಿ ಹಾಗೂ ಮುಂಬಯಿಯನ್ನು ಸಂಪರ್ಕಿಸುವ ಕೊಂಕಣ ರೈಲ್ವೇ ಉಡುಪಿ ನಿಲ್ದಾಣವು ರತ್ನಗಿರಿ ಮತ್ತು ಮಡ್ಗಾಂವ್ ಹೊರತುಪಡಿಸಿ ಅತೀ ಹೆಚ್ಚು ಪ್ರಯಾಣಿಕರು ಮತ್ತು ಸಾಮಾನ್ಯ ವಾಣಿಜ್ಯ ವಹಿವಾಟು ಇರುವ ನಿಲ್ದಾಣ. ದಿನವೊಂದಕ್ಕೆ ಸಾವಿರಾರು ಮಂದಿ ಪ್ರಯಾಣಿಕರು ಈ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದರೂ ಮೂಲ ಆವಶ್ಯಕತೆ ಪೂರೈಸಲು ಇನ್ನೂ ಕಾರ್ಯ ಸಾಧ್ಯವಾಗಲಿಲ್ಲ.
Related Articles
Advertisement
ಉಪಯೋಗಕ್ಕಿಲ್ಲದ ಎಸ್ಕಲೇಟರ್
ಕೊಂಕಣ ರೈಲ್ವೇಯಿಂದ ರೈಲು ನಿಲ್ದಾಣದಲ್ಲಿ 2016ರಂದು ಉದ್ಘಾಟಿಸಿದ್ದ ಎಸ್ಕಲೇಟರ್ ಪ್ರಯಾಣಿಕರ ಉಪಯೋಗಕ್ಕಿಲ್ಲದಂತಾಗಿದೆ. ಉದ್ಘಾಟನೆಗೊಂಡ ಕೆಲ ದಿನಗಳ ಕಾಲ ಮಾತ್ರ ಕಾರ್ಯಾಚರಿಸಿದ್ದ ಈ ಎಸ್ಕಲೇಟರ್ ಅನಂತರ ನಿಷ್ಪ್ರಯೋಜಕವಾಗಿದೆ. ಇದನ್ನು ಪ್ರಯಾಣಿಕರ ಉಪಯೋಗ ಮಾಡಬೇಕು ಎಂದು ಹಲವಾರು ಬಾರಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಎಸ್ಕಲೇಟರ್‌ನಲ್ಲಿ ಧೂಳು ತುಂಬಿದೆ.
ಕೇಂದ್ರ ಸಚಿವರಿಗೆ ಮನವಿ: ಇಂದ್ರಾಳಿ ರೈಲ್ವೇಗೆ ಬೇಕಿರುವ ಮೇಲ್ಛಾವಣಿ ವ್ಯವಸ್ಥೆ ಹಾಗೂ ಎಸ್ಕಲೇಟರ್ ಸೌಲಭ್ಯದ ದುರಸ್ತಿ ಬಗ್ಗೆ ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅವರು ದುರಸ್ತಿಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುವ ಬಗ್ಗೆ ಭರವಸೆ ನೀಡಿದ್ದಾರೆ. –ಶೇಖರ ಎನ್. ಕೋಟ್ಯಾನ್, ಅಧ್ಯಕ್ಷರು, ರೈಲ್ವೇ ಯಾತ್ರಿ ಸಂಘ, ಉಡುಪಿ