ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನದ ಉದ್ಘಾಟನೆ ಆ. 7ರಂದು ಬೆಳಗ್ಗೆ 10ಕ್ಕೆ ಸುರತ್ಕಲ್ ಬಳಿಯ ಕೃಷ್ಣಾಪುರ ಯುವಕ ಮಂಡಲದಲ್ಲಿ ನಡೆಯಲಿದೆ. ಇಂದ್ರಧನುಷ್ ಅಭಿಯಾನವು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿದೆ. ಅಗತ್ಯವಿರುವ ರೋಗ ನಿರೊಧಕ ಚುಚ್ಚುಮದ್ದಿನಿಂದ ಭಾಗಶಃ ಅಥವಾ ಪೂರ್ಣಪ್ರಮಾಣದಲ್ಲಿ ವಂಚಿತರಾದ ಗರ್ಭಿಣಿಯರು 0-2 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಪೂರ್ಣ ಮತ್ತು ಸಂಪೂರ್ಣ ಲಸಿಕೆ ನೀಡುವುದು ಈ ಅಭಿಯಾನದ ಉದ್ದೇಶ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದರು.
Advertisement
ಈ ಕಾರ್ಯಕ್ರಮದಡಿ ಮಕ್ಕಳಲ್ಲಿ ಕಂಡುಬರುವಂತಹ ಬಾಲಕ್ಷಯ, ಪೋಲಿಯೊ, ಗಂಟಲುಮಾರಿ (ಢಿಪ್ತಿàರಿಯಾ), ನಾಯಿಕೆಮ್ಮು, ಧನುರ್ವಾಯು, ಹಿಬ್,ಕಾಮಾಲೆ (ಹೆಪಟೈಟಸ್-ಬಿ), ರೋಟ ವೈರಸ್, ನ್ಯೂಮೋಕಾಕಲ್, ದಡಾರ, ರುಬೆಲ್ಲಾದಂತಹ 10 ಮಾರಕ ರೋಗ ನಿರೋಧಕ ಲಸಿಕೆ ನೀಡಲಾಗುತ್ತದೆ.
ಇಂದ್ರಧನುಷ್ ಅಭಿಯಾನವು 3 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಆಗಸ್ಟ್ 7ರಿಂದ 12ರ ವರೆಗೆ, ಎರಡನೇ ಹಂತ ಸೆಪ್ಟಂಬರ್ 11ರಿಂದ 16ರ ವರೆಗೆ, ಮೂರನೇ ಹಂತ ಅಕ್ಟೋಬರ್ 9ರಿಂದ 14ರ ವರೆಗೆ ನಡೆಯಲಿದೆ. ರವಿವಾರ, ಸರಕಾರಿ ರಜಾ ದಿನ ಹೊರತುಪಡಿಸಿ ವಾರದ ಆರು ದಿನ ಲಸಿಕೆ ನೀಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಉಪ ಆರೋಗ್ಯ ಕೇಂದ್ರ, ಕ್ಯಾಂಪ್ ಮೂಲಕವೂ ನೀಡಲಾಗುವುದು ಎಂದರು. ದ.ಕ.ದಲ್ಲಿ 98 ದಡಾರ ಪ್ರಕರಣ: ದ.ಕ.ದ 210 ಮಂದಿಯ ಮಾದರಿ ಪರೀಕ್ಷೆಯಲ್ಲಿ 98 ಮಂದಿಯಲ್ಲಿ ದಡಾರ ದೃಢಪಟ್ಟಿದೆ. ಹೆಚ್ಚಿನ ಪ್ರಕರಣಗಳು ಕೇರಳ, ಇತರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಇದ್ದು, ಬಂಟ್ವಾಳದ ಕುರ್ನಾಡಿನಲ್ಲಿ ಸ್ಥಳೀಯವಾಗಿ ಪ್ರಕರಣವೊಂದು ಪತ್ತೆಯಾಗಿದೆ ಎಂದರು.
ಡಬ್ಲ್ಯುಎಚ್‌ಒ ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ| ಅನಂತೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.