Advertisement

ಇಂದ್ರಧನುಷ್‌ ಯೋಜನೆಸದ್ಬಳಕೆಯಾಗಲಿ: ವಿಶ್ವನಾಥ್‌

11:21 AM Dec 01, 2019 | Team Udayavani |

ಚಿಂತಾಮಣಿ: ಕೂಲಿಗಾಗಿ ವಲಸೆ ಬಂದಿರುವವರಲ್ಲಿ ಗರ್ಭಿಣಿಯರು ಹಾಗೂ 2 ವರ್ಷ  ದೊಳಗಿನ ಮಕ್ಕಳಿಗೆ 7 ಕಾಯಿಲೆಗಳನ್ನು ತಡೆಯುವ ಲಸಿಕೆಗಳನ್ನು ಆಗಿಂದಾಗ್ಗೆ ನೀಡುವ “”ಇಂದ್ರಧನುಷ್‌” ಕಾರ್ಯ ಕ್ರಮಕ್ಕೆ ಡಿ. 2 ರಿಂದ ಮಾರ್ವ್‌ 2020 ರವರೆಗೆಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್‌ಎಸ್‌.ಎಲ್‌.ವಿಶ್ವನಾಥ್‌ ತಿಳಿಸಿದರು.

Advertisement

ನಗರದ ತಾಲೂಕು ಆರೋಗ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಮಾತನಾಡಿ, ಕಾಮಾಲೆ, ಬಾಲಕ್ಷಯ ರೋಗ,ಧನುರ್ವಾಯು, ಪಾರ್ಶವಾಯು ಹಾಗೂ ನಂಜಿನ ಈ 5 ಲಸಿಕೆಗಳನ್ನು ಮೂರೂವರೆ ತಿಂಗಳೊಳಗಿನ ಮಗುವಿಗೆ ನೀಡಲಾಗುವುದು ಹಾಗೂ ಆ ನಂತರಮೆದುಳುಜ್ವರ ಮತ್ತು ಅತಿಸಾರಭೇದಿಯ ಈ 2ಲಸಿಕೆಗಳನ್ನು9 ತಿಂಗಳೊಳಗಾಗಿ ನೀಡುವ ಮೂಲಕ ಒಟ್ಟು 7 ಮಾರ ಣಾಂತಿಕ ಕಾಯಿಲೆಗಳನ್ನುತಡೆಗಟ್ಟುವ ಯೋಜನೆಯೇ ಈ ಇಂದ್ರಧನುಷ್‌ ಸದುದ್ದೇಶ ಎಂದರು.

ವಲಸೆ ಬಂದು ಇಟ್ಟಿಗೆ ಫ್ಯಾಕ್ಟರಿ, ನೂಲು ತೆಗೆಯುವುದು, ಫೋನ್‌/ವಿದ್ಯುತ್‌ ತಂತಿ ಅಳವಡಿಕೆದಾರರು, ಕೋಳಿ/ಹಂದಿ ಇತ್ಯಾದಿಸಾಕಾಣಿಕೆ ಕೇಂದ್ರಗಳು ಹೀಗೆ ಅವರದ್ದೇ ಕೂಲಿಕಾರ್ಯಗಳಲ್ಲಿ ನಿರತರಾಗಿರುವ ಗರ್ಭಿಣಿ ಹಾಗೂ ಮಕ್ಕಳನ್ನು ಪತ್ತೆ ಹಚ್ಚಲು ಸಾವಿರ ಜನಸಂಖ್ಯೆಗೆ ಅನುಗುಣವಾಗಿ ನೇಮಕ ಮಾಡಿರುವ ಒಟ್ಟು 224 ಆಶಾ ಕಾರ್ಯಕರ್ತೆಯರಿಂದ ಅರ್ಹರನ್ನು ಪತ್ತೆ ಹಚ್ಚಿ ಅವರಿರುವಲ್ಲಿಗೆ ಹೋಗಿ ಲಸಿಕೆ ಹಾಕಲಾಗುವುದು ಎಂದರು.

ಈ ಸಾಲಿನಲ್ಲಿ ಇದುವರೆಗೂ 38 ಮಕ್ಕ ಳನ್ನು ಪತ್ತೆ ಹಚ್ಚಿದ್ದು, ಮುಂದಿನ ದಿನಗಳಲ್ಲಿ ಕರಾರುವಕ್ಕಾದ ಮಾಹಿತಿ ಆಧರಿಸಿ ಲಸಿಕೆ ಹಾಕಲಾಗುವುದು. ಒಂದೊಮ್ಮೆ ಯಾರಾದರೂ ತಪ್ಪಿದ್ದಲ್ಲಿ ಆ ಭಾಗದ ಸ್ಥಳೀಯರು ಸ್ಥಳೀಯ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಮೋಹನ್‌ಕುಮಾರ್‌, ತಾಲೂಕು ಆರೋಗ್ಯಾ ಧಿಕಾರಿ ಡಾ.ರಾಮಚಂದ್ರಾರೆಡ್ಡಿ, ಡಾ. ಸಂತೋಷ್‌, ಡಾ.ಶ್ರೀನಿವಾಸರೆಡ್ಡಿ, ಬಿಸಿಎಂಇಲಾಖೆಯ ವೆಂಕಟರವಣಪ್ಪ, ನಗರಸಭೆಯ ಉಮಾಶಂಕರ್‌, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣಪ್ಪ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next