Advertisement

ರಾಜಕೀಯ ಪ್ರವೇಶಿಸಲ್ಲ : ಇಂದಿರಾ ನೂಯಿ

09:40 AM Aug 08, 2018 | Team Udayavani |

ನ್ಯೂಯಾರ್ಕ್‌: ಇದೇ ಅಕ್ಟೋಬರ್‌ ನಲ್ಲಿ ಪೆಪ್ಸಿಕೋ ಸಿಇಒ ಹುದ್ದೆ ತೊರೆಯುತ್ತಿರುವ ಇಂದಿರಾ ನೂಯಿ, ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದೀರ್ಘ‌ ವರ್ಷಗಳ ಔದ್ಯೋಗಿಕ ಜೀವನದ ಬಳಿಕ ಈಗ ತಾವು ಸಂಪೂರ್ಣವಾಗಿ ಕುಟುಂಬದ ಮೇಲೆ ಗಮನ ಹರಿಸುವುದಾಗಿ ಹೇಳಿದ್ದಾರೆ. ‘ನಾನು ರಾಜಕೀಯಕ್ಕೆ ತಕ್ಕ ವ್ಯಕ್ತಿಯಲ್ಲ. ನಾನು ಉತ್ತಮ ಉದ್ಯೋಗಿ ಅಷ್ಟೇ. ಉದ್ಯೋಗಾವಧಿ ಮುಗಿದ ಬಳಿಕ ಮತ್ತೆ ಕಚೇರಿಗಳಿಗೆ ಎಡತಾಕಲು ನನಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next