Advertisement

ಆಸರೆಯಾದ ಪೂಜಾರ, ರಾಹುಲ್‌, ರಹಾನೆ : ಭಾರತಕ್ಕೆ 126 ರನ್‌ ಲೀಡ್‌

05:30 PM Mar 06, 2017 | udayavani editorial |

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ ಎರಡನೇ ಟೆಸ್ಟ್‌ ಪಂದ್ಯದ ಇಂದಿನ ಮೂರನೇ ದಿನದಾಟದ  ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್‌ ಆಟದಲ್ಲಿ ನಾಲ್ಕು ವಿಕೆಟ್‌ನಷ್ಟಕ್ಕೆ 213 ರನ್‌ ತೆಗೆದು ಸಮಾಧಾನಕರ ಸ್ಥಿತಿಯನ್ನು ತಲುಪಿತು.

Advertisement

ಚೇತೇಶ್ವರ ಪೂಜಾರ ಅಜೇಯ 79 ರನ್‌ ಬಾರಿಸಿ ಭಾರತಕ್ಕೆ ಅತೀ ಅಗತ್ಯವಿದ್ದ ಆಧಾರವನ್ನು ಒದಗಿಸಿದರು. ಪೂಜಾರ ಜತೆ ಅತ್ಯಂತ ಎಚ್ಚರಿಕೆಯ ಆಟವನ್ನು ಪ್ರದರ್ಶಿಸುತ್ತಿರುವ ಅಜಿಂಕ್ಯ ರಹಾಣೆ ಅವರು 40 ರನ್‌ ಬಾರಿಸಿ ಕ್ರೀಸಿನಲ್ಲಿ ಉಳಿದಿದ್ದಾರೆ.

ಭಾರತ ಈಗ 126 ರನ್‌ಗಳ ಲೀಡ್‌ ಹೊಂದಿದೆ. ಆದರೆ ಇನ್ನೂ ಎರಡು ದಿನಗಳ ಆಟ  ಬಾಕಿ ಇರುವುದರಿಂದ ಈ ಪಂದ್ಯಕ್ಕೆ ಫ‌ಲಿತಾಂಶ ಬರುವುದು ಬಹುತೇಕ ನಿಶ್ಚಿತವಿದೆ. ಪುಣೆಯಲ್ಲಾದ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ ಹೀನಾಯವಾಗಿ ಸೋತಿತ್ತು. ಹಾಗಾಗಿ ನಾಲ್ಕು ಟೆಸ್ಟ್‌ ಪಂದ್ಯಗಳ ಈ ಸರಣಿಯಲ್ಲಿ ಅದು 0-1 ಅಂತರದಿಂದ ಹಿಂದೆ ಬಿದ್ದಿದೆ. 

ಇಂದಿನ ಎರಡನೇ ದಿನದ ಆಟದಲ್ಲಿ  ಸೋಮವಾರ ಬೆಳಗ್ಗೆ ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ  276 ರನ್‌ಗಳಿಗೆ ಆಲೌಟಾಯಿತು. ಆ ಮೂಲಕ ಅದು 87 ರನ್‌ ಗಳ ಅತ್ಯಮೂಲ್ಯ ಲೀಡ್‌ ಸಂಪಾದಿಸಿತು. 

ನಿನ್ನೆಯ ಎರಡನೇ ದಿನದಾಟದ ಕೊನೆಗೆ ಆರು ವಿಕೆಟ್‌ ನಷ್ಟಕ್ಕೆ 237 ರನ್‌ ಇದ್ದಲ್ಲಿಂದ ಇಂದು 3ನೇ ದಿನದ ಆಟವನ್ನು ಆರಂಭಿಸಿದ ಆಸೀಸ್‌, ಕೇವಲ 39 ರನ್‌ ಗಳನ್ನು 16.4 ಓವರ್‌ಗಳ ಆಟದಲ್ಲಿ ಸೇರಿಸುವಷ್ಟರಲ್ಲಿ ತನ್ನ ಉಳಿದ ಎಲ್ಲ 4 ವಿಕೆಟ್‌ಗಳನ್ನು ಕಳೆದುಕೊಂಡಿತು. 

Advertisement

ಭಾರತದ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಕೇವಲ 10 ಬಾಲ್‌ಗ‌ಳಲ್ಲಿ ಮೂರು ವಿಕೆಟ್‌ ಕಿತ್ತು ತಮ್ಮ ಒಟ್ಟು ವಿಕೆಟ್‌ ಸಂಪಾದನೆಯನ್ನು ಆರಕ್ಕೆ ಏರಿಸಿಕೊಂಡರು. 

ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ  ಅಭಿನವ್‌ ಮುಕುಂದ್‌ (32 ಎಸೆತ 16 ರನ್‌) ಅವರನ್ನು  ಬೇಗನೆ ಕಳೆದುಕೊಂಡಿತು. ಅನಂತರದಲ್ಲಿ ಭಾರತ ರವೀಂದ್ರ ಜಡೇಜ (2), ನಾಯಕ ವಿರಾಟ್‌ ಕೊಹ್ಲಿ (15) ಅವರನ್ನು ಕಳೆದುಕೊಂಡಿತು. ಅನಂತರ ಲೋಕೇಶ್‌ ರಾಹುಲ್‌ (51) ವಿಕೆಟ್‌ ಪತನವಾಯಿತು.

ಮುರಿಯದ ಐದನೇ ವಿಕೆಟ್‌  ಜತೆಗಾರಿಕೆಯಲ್ಲಿ ಪೂಜಾರ ಮತ್ತು ಅಜಿಂಕ್ಯ ರಹಾಣೆ ಅವರಿಂದ ತಂಡಕ್ಕೆ 93 ರನ್‌ಗಳ ಅಮೂಲ್ಯ ಕಾಣಿಕೆ ಪ್ರಾಪ್ತವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next