ಇಂದೋರ್: ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂದೋರ್ ಸಜ್ಜಾಗಿದೆ. ಇಲ್ಲಿನ ಹೋಳ್ಕರ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮುಖಾಮುಖಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಆಸೀಸ್ ತಂಡದಲ್ಲಿ ನಿರೀಕ್ಷೆಯಂತೆಯೇ ಎರಡು ಬದಲಾವಣೆ ಮಾಡಲಾಗಿದೆ. ಗಾಯಗೊಂಡು ಕೂಟದಿಂದ ಹೊರಬಿದ್ದಿರುವ ಡೇವಿಡ್ ವಾರ್ನರ್ ಬದಲಿಗೆ ಕ್ಯಾಮರೂನ್ ಗ್ರೀನ್ ಸ್ಥಾನ ಪಡೆದರೆ, ತವರಿಗೆ ತೆರಳಿರುವ ನಾಯಕ ಪ್ಯಾಟ್ ಕಮಿನ್ಸ್ ಬದಲಿಗೆ ಮಿಚೆಲ್ ಸ್ಟಾರ್ಕ್ ಆಡುವ ಬಳಗದಲ್ಲಿ ಸ್ಥಾನ ಸಂಪಾದಿಸಿದ್ದಾರೆ,
ಭಾರತ ತಂಡದಲ್ಲಿಯೂ ನಿರೀಕ್ಷಿತ ಬದಲಾವಣೆಯಾಗಿದೆ. ಕಳಪೆ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಬದಲಾಗಿ ಶುಭ್ಮನ್ ಗಿಲ್ ಅವರು ತಂಡಕ್ಕೆ ಆಗಮಿಸಿದ್ದಾರೆ. ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಉಮೇಶ್ ಯಾದವ್ ತಂಡಕ್ಕೆ ಮರಳಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿ.ಕೀ), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ (ನಾ), ಪೀಟರ್ ಹ್ಯಾಂಡ್ ಸ್ಕಾಂಬ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿ.ಕೀ), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್