Advertisement

ಹೋಳಿ ಸಂಭ್ರಮದಲ್ಲಿ ಚಾಕು ಚುಚ್ಚಿಕೊಂಡು ಸತ್ತ!

08:44 PM Mar 19, 2022 | Team Udayavani |

ಭೋಪಾಲ್‌: ಶುಕ್ರವಾರ ದೇಶಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಅದೇ ರೀತಿ ಮಧ್ಯಪ್ರದೇಶದ ಇಂದೋರ್‌ನ ಬಂಗಂಗಾ ಪ್ರದೇಶದಲ್ಲಿ ಹೋಳಿ ಹಬ್ಬ ಆಚರಿಸುತ್ತಿದ್ದ ವ್ಯಕ್ತಿಯೊಬ್ಬ ತನಗೆ ತಾನೇ ಚಾಕುವಿನಿಂದ ಚುಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ಗೋಪಾಲ್‌ ಸೋಲಂಕಿ(38) ಹೆಸರಿನ ವ್ಯಕ್ತಿ ಸ್ನೇಹಿತರೊಂದಿಗೆ ಕಂಠಪೂರ್ತಿ ಕುಡಿದು, ನೃತ್ಯ ಮಾಡುತ್ತಿದ್ದ. ಕುಡಿದ ನಶೆಯಲ್ಲೇ ಆತ ಹೃದಯದ ಭಾಗಕ್ಕೆ ಚಾಕುವಿನಿಂದ ನಾಲ್ಕು ಬಾರಿ ಚುಚ್ಚಿಕೊಂಡಿದ್ದಾನೆ. ರಕ್ತ ಸುರಿಯುವುದನ್ನು ಕಂಡು ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಆಸ್ಪತ್ರೆಗೆ ಬರುವ ಮೊದಲೇ ಪ್ರಾಣ ಬಿಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next