Advertisement

ಯುವ ವಿಭಾಗದಿಂದ ಒಳಾಂಗಣ ಕ್ರೀಡಾ ಸ್ಪರ್ಧೆ

09:19 AM Jan 12, 2022 | Team Udayavani |

ಡೊಂಬಿವಲಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಡೊಂಬಿವಲಿ ವತಿಯಿಂದ ಒಳಾಂಗಣ ಕ್ರೀಡಾಕೂಟವು ಸ್ಥಳೀಯ ಕಚೇರಿಯ ಸಭಾಂಗಣದಲ್ಲಿ ಜ. 2ರಂದು ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳೊಂದಿಗೆ ಜರಗಿತು.

Advertisement

ಪೂರ್ವಾಹ್ನ 9.30ರಿಂದ ಅಪರಾಹ್ನ 2ರ ವರೆಗೆ ಡೊಂಬಿವಲಿ ಸ್ಥಳೀಯ ಸಮಿತಿಯ ಯುವ ವಿಭಾಗದ ವತಿಯಿಂದ ನಡೆದ ಈ ಒಳಾಂಗಣ ಕ್ರೀಡಾ ಸ್ಪರ್ಧೆಯಲ್ಲಿ  ಕೇರಂ, ಚೆಸ್‌ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ  ಪುರೋಹಿತ ಐತಪ್ಪ ಸುವರ್ಣ ಅವರು ಬ್ರಹ್ಮಶ್ರೀ ನಾರಾಯಣಗುರು ಹಾಗೂ ಶಾರದಾ ದೇವಿಯ ಭಾವಚಿತ್ರವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಾ ವಿಧಿವಿಧಾನಗಳನ್ನು ಪೂರೈಸಿದರು.

ಒಳಾಂಗಣ ಕ್ರೀಡಾಕೂಟವನ್ನು ಗೌರವ ಕಾರ್ಯಾಧ್ಯಕ್ಷ ದೇವರಾಜ್‌ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷ ರವಿ ಸನಿಲ್, ಉಪಾಧ್ಯಕ್ಷ ಶ್ರೀಧರ್‌ ಅಮೀನ್‌ ಹಾಗೂ ಪುರಂದರ ಪೂಜಾರಿ, ಗೌರವ ಕಾರ್ಯದರ್ಶಿ ಸಚಿನ್‌ ಪೂಜಾರಿ, ಗೌರವ ಕೋಶಾಧಿಕಾರಿ ಆನಂದ್‌ ಪೂಜಾರಿ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಸುಮಾರು 50ಕ್ಕೂ ಹೆಚ್ಚಿನ ಸ್ಪರ್ಧಾಳು ಗಳು ಭಾಗವಹಿ ಸುವುದರ ಜತೆಗೆ ಬಿಲ್ಲವ ಸಮಾಜದ ಹೆಚ್ಚಿನ ಸದ್ಯಸರು ಭಾಗವಹಿಸಿ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು. ಕ್ರೀಡಾಕೂಟದ ಆಯೋಜನೆಯ ಸಂಪೂರ್ಣ ಮುಂದಾ ಳತ್ವವನ್ನು ರವಿ ಸನಿಲ್‌ ವಹಿಸಿಕೊಂಡಿದ್ದರು. ಯುವ ವಿಭಾಗದ ಮತ್ತು ಕಾರ್ಯಕಾರಿ ಸಮಿತಿಯ ಸಹಕಾರದೊಂದಿಗೆ ಕ್ರೀಡಾ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು.

ಚಿತ್ರಕಲೆ ಸ್ಪರ್ಧೆಯ ತೀರ್ಪುಗಾರರಾಗಿ ಜಯ ಸಾಲ್ಯಾನ್‌ ಮತ್ತು ಕೇರಂ ಸ್ಪರ್ಧೆಯ ತೀರ್ಪುಗಾರರಾಗಿ ಕೆ. ಜಿ. ಸಾಲ್ಯಾನ್‌ ಸಹಕರಿಸಿದರು. ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಚಂದ್ರಹಾಸ್‌ ಪಾಲನ್‌ ಅವರು ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಸಹಕರಿಸಿದರು.

Advertisement

ಕಾರ್ಯಕ್ರಮದಲ್ಲಿ ಕಲ್ಯಾಣ್‌ ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ನಂದೀಶ್‌ ಪೂಜಾರಿ ಹಾಗೂ ಕೇಂದ್ರ ಕಾರ್ಯಾಲಯದ ಜತೆ ಕೋಶಾಧಿಕಾರಿ ಶರತ್‌ ಜಿ. ಪೂಜಾರಿ ಉಪಸ್ಥಿತರಿದ್ದರು.

ಕ್ರೀಡಾಕೂಟದ ಕೊನೆಯಲ್ಲಿ ಚಿತ್ರಕಲೆ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಜಯ ಸಾಲ್ಯಾನ್‌ ಅವರನ್ನು ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ದೇವರಾಜ್‌ ಪೂಜಾರಿ ಗೌರವಿಸಿದರು. ಕ್ರೀಡಾಕೂಟದ ಮುಂದಾಳತ್ವವನ್ನು ವಹಿಸಿ ಉತ್ತಮ ರೀತಿಯಲ್ಲಿ ನೆರವೇರಿಸಿದ ರವಿ ಸನಿಲ್‌ ಅವರನ್ನು ಸ್ಥಳೀಯ ಕಚೇರಿಯ ಉಪಾಧ್ಯಕ್ಷ ಪುರಂದರ ಪೂಜಾರಿ ಗೌರವಿಸಿದರು.

ಕಲ್ಯಾಣ್‌ ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ನಂದೀಶ್‌ ಪೂಜಾರಿ ಅವರನ್ನು ಸ್ಥಳೀಯ ಕಚೇರಿಯ ಕಾರ್ಯದರ್ಶಿ ಸಚಿನ್‌ ಪೂಜಾರಿ ಮತ್ತು ಕೆ. ಜಿ. ಸಾಲ್ಯಾನ್‌ ಅವರನ್ನು ಕೋಶಾಧಿಕಾರಿ ಆನಂದ್‌ ಪೂಜಾರಿ ಗೌರವಿಸಿದರು. ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next