ಪ್ರಾಯಾ ಸಿಟಿ(ಇಂಡೋನೇಷ್ಯಾ) : ಮೂಲಭೂತ ಸಮಸ್ಯೆಗಳ ಬಗ್ಗೆ ಜನ ಪ್ರತಿನಿಧಿಗಳು ಮತ್ತು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆಗಳನ್ನು ಮಾಡುವುದು ಸಾಮಾನ್ಯ. ಕೆಲವು ಪ್ರತಿಭಟನಾಕಾರರು ವಿಭಿನ್ನ ರೀತಿಯಲ್ಲಿ ಪ್ರೊಟೆಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಾರೆ. ಇಂಡೋನೇಷ್ಯಾದ ವ್ಯಕ್ತಿಯೊಬ್ಬ ಹದಗೆಟ್ಟ ರಸ್ತೆ ಸರಿ ಮಾಡುವಂತೆ ವಿಶೇಷವಾಗಿ ಪ್ರತಿಭಟನೆ ಮಾಡಿದ್ದಾರೆ.
ಇಂಡೋನೇಷ್ಯಾದ ಪ್ರಾಯಾ ನಗರದ ರಸ್ತೆಗಳಲ್ಲಿ ಗುಡಿ ಬಿದ್ದಿದ್ದು, ಇವುಗಳನ್ನು ಸರಿಪಡಿಸುವಂತೆ ಅದೇ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿ ಸ್ನಾನ ಮಾಡುವ ಮೂಲಕ ವ್ಯಕ್ತಿಯೊಬ್ಬ ಗಮನ ಸೆಳೆದಿದ್ದಾರೆ.
ಈ ರೀತಿ ಪ್ರತಿಭಟನೆ ಮಾಡಿರುವ ವ್ಯಕ್ತಿಯನ್ನು ಅಮಾಕ್ ಓಹಾನ್ ಎಂದು ಗುರುತಿಸಲಾಗಿದೆ. ಇವರು ಸಾಮಾಜಿಕ ಹೋರಾಟಗಾರರಾಗಿದ್ದು ರಸ್ತೆ ಸರಿ ಮಾಡುವಂತೆ ಪ್ರತಿಭಟಿಸಿದ್ದಾರೆ. ಇಷ್ಟೆ ಅಲ್ಲದೆ ಈ ಹಿಂದೆ ರಸ್ತೆ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿ ಮೀನಿಗೆ ಗಾಳ ಹಾಕಿದಂತೆ ಮಾಡಿ ಸರ್ಕಾರವನ್ನು ವ್ಯಂಗ್ಯ ಮಾಡಿದ್ದರು.
ಅಮಾಕ್ ಓಹಾನ್ ಮಾಡಿರುವ ಪ್ರತಿಭಟನೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಆಡಳಿತ ರಸ್ತೆಗಳನ್ನು ಸರಿ ಮಾಡಿದೆ ಎಂದು ವರದಿಯಾಗಿದೆ.