Advertisement

Indonesia Super 1000: ಭಾರತಕ್ಕೆ ಮತ್ತೂಂದು ಸವಾಲು

11:01 PM Jun 12, 2023 | Team Udayavani |

ಜಕಾರ್ತಾ: ತಮ್ಮ ವೈಫ‌ಲ್ಯವನ್ನು ಹೋಗಲಾಡಿಸಿಕೊಳ್ಳಲು ಭಾರತದ ಶಟ್ಲರ್‌ಗಳಿಗೆ ಮತ್ತೂಂದು ಅವಕಾಶ ಎದುರಾಗಿದೆ. ಮಂಗಳ ವಾರದಿಂದ ಜಕಾರ್ತಾದಲ್ಲಿ “ಇಂಡೋ ನೇಷ್ಯಾ ಓಪನ್‌ ಸೂಪರ್‌- 1000′ ಬ್ಯಾಡ್ಮಿಂಟನ್‌ ಪಂದ್ಯಾವಳಿ ಆರಂಭ ವಾಗಲಿದ್ದು, ಇಲ್ಲಿ ಉತ್ತಮ ಪ್ರದ ರ್ಶನದ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
“ಮಲೇಷ್ಯಾ ಮಾಸ್ಟರ್ ಸೂಪರ್‌-300′ ಚಾಂಪಿಯನ್‌ ಎಚ್‌.ಎಸ್‌. ಪ್ರಣಯ್‌ ಈ ಕೂಟದಲ್ಲಿ ಭಾರತದ ಭರವಸೆ ಆಗಿದ್ದಾರೆ. ಇಲ್ಲಿ ಅವರ ಮೊದಲ ಸುತ್ತಿನ ಎದುರಾಳಿ ಜಪಾನ್‌ನ ಕೆಂಟ ನಿಶಿಮೊಟೊ. ಗೆದ್ದರೆ ಚೀನದ ಶಿ ಯುಕಿ ಸವಾಲು ಎದುರಾಗಬಹುದು.

Advertisement

ಸತತ ವೈಫ‌ಲ್ಯ ಕಾಣುತ್ತಲೇ ಇರುವ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್‌ ಕೂಡ ಕಣದಲ್ಲಿದ್ದಾರೆ. ಜಕಾ ರ್ತಾದಲ್ಲಾದರೂ ಇವರು ಜದರ್ಬಸ್ತ್ ಪ್ರದರ್ಶನ ನೀಡ ಬೇಕಿದೆ. ಸಿಂಧು ಕಳೆದೆರಡೂ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಆಟ ಮುಗಿಸಿದ್ದರು. ಶ್ರೀಕಾಂತ್‌ಗೆ ಕ್ವಾರ್ಟರ್‌ ಫೈನಲ್‌ ಹಂತವೇ ಅಂತಿಮವಾಗುತ್ತಿದೆ. ಇವರಿಬ್ಬರು ಪ್ರಥಮ ಸುತ್ತಿನಲ್ಲಿ ಕ್ರಮವಾಗಿ ಇಂಡೋನೇಷ್ಯಾದ ಜಾರ್ಜಿಯಾ ಮರಿಸ್ಕಾ ಮತ್ತು ಚೀನದ ಲು ಗುವಾಂಗ್‌ ಜು ಸವಾಲು ಎದುರಿಸುವರು.

ಸೈನಾ ನೆಹ್ವಾಲ್‌ ಅವರ ಪ್ರಥಮ ಸುತ್ತಿನ ಎದುರಾಳಿ ಚೀನದ ವಾಂಗ್‌ ಜೀ ಯೀ. ಥಾಯ್ಲೆಂಡ್‌ ಓಪನ್‌ ಸೆಮಿಫೈನಲಿಸ್ಟ್‌ ಲಕ್ಷ್ಯಸೇನ್‌ ಮಲೇಷ್ಯಾದ ಲೀ ಜೀ ಜಿಯ ವಿರುದ್ಧ ಹೋರಾಟ ಆರಂಭಿಸಲಿದ್ದಾರೆ.

ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿಗೆ ಭಾರೀ ಸವಾಲು ಎದುರಾಗಿದೆ. ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಮಾರ್ಕಸ್‌ ಫೆರ್ನಾಲ್ಡಿ-ಕೆವಿನ್‌ ಸಂಜಯ ಸುಕಮುಲೊ ವಿರುದ್ಧ ಸೆಣಸಲಿದ್ದಾರೆ. ಇವರೆದುರು ಆಡಿದ 11 ಪಂದ್ಯಗಳಲ್ಲಿ ಭಾರತದ ಜೋಡಿ ಒಂದನ್ನೂ ಗೆದ್ದಿಲ್ಲ.
ಎಂ.ಆರ್‌. ಅರ್ಜುನ-ಧ್ರುವ ಕಪಿಲ, ಟ್ರೀಸಾ ಜಾಲಿ-ಗಾಯಿತ್ರಿ ಗೋಪಿಚಂದ್‌ ಕೂಡ ಡಬಲ್ಸ್‌ ಸ್ಪರ್ಧೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next