ಜಕಾರ್ತ: ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್ ವಿಮಾನವೊಂದು ( ಬೋಯಿಂಗ್ 737-500) ಇಂದು (ಶನಿವಾರ) ನಾಪತ್ತೆಯಾಗಿದೆ. ಮಧ್ಯಾಹ್ನ 1.56ಕ್ಕೆ ಟೇಕಾಫ್ ಆಗಿದ್ದ ವಿಮಾನ ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆ ಸಂಪರ್ಕ ಕಳೆದುಕೊಂಡಿದೆ.
ಈ ವಿಮಾನದಲ್ಲಿ 56 ಪ್ರಯಾಣಿಕರು, 6 ಜನ ಸಿಬ್ಬಂದಿಗಳು ಸೇರಿ ಒಟ್ಟು 62 ಜನರಿದ್ದರು ಎಂದು ಇಂಡೊನೇಷ್ಯಾದ ಸಾರಿಗೆ ಸಚಿವಾಲಯದ ವಕ್ತಾರರಾದ ಅದಿತಾ ಇರಾವತಿ ತಿಳಿಸಿದ್ದಾರೆ.
ಶ್ರೀವಿಜಯ ಏರ್ ವಿಮಾನ ಜಕಾರ್ತದಿಂದ ಬೋರ್ನಿಯೋ ದ್ವೀಪದ ವೆಸ್ಟ್ ಕಲಿಮಂತಾನ್ ಪ್ರಾಂತ್ಯದ ರಾಜಧಾನಿ ಪೊಂಟಿಯಾನಕ್ ಗೆ ಹೊರಟಿತ್ತು. ಟೇಕಾಫ್ ಆದ ಕೆಲಸ ನಿಮಿಷಗಳಲ್ಲೇ ಈ ವಿಮಾನ ಸಂಪರ್ಕ ಕಳೆದುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಇದನ್ನೂ ಓದಿ: ದುಬೈ :ಕೋವಿಡ್ ಲಸಿಕೆ ತೆಗೆದುಕೊಂಡ ಬಾಲಿವುಡ್ ನ ಮೊದಲ ನಟಿ ಶಿಲ್ಪಾ ಶಿರೋಡ್ಕರ್
ಈ ವಿಮಾನ 26 ವರ್ಷ ಹಳೆಯದಾಗಿದ್ದು 1994ರಲ್ಲಿ ತನ್ನ ಮೊದಲ ಹಾರಾಟವನ್ನು ನಡೆಸಿತ್ತು. ಇದೀಗ ನಾಪತ್ತೆಯಾದ ವಿಮಾನವನ್ನು ಪತ್ತೆಹಚ್ಚುವ ಕಾರ್ಯಗಳಾಗುತ್ತಿದ್ದು, ನ್ಯಾಷನಲ್ ಸರ್ಚ್ ಅಂಡ್ ರೆಸ್ಕ್ಯೂ ಏಜೆನ್ಸಿ ಹಾಗೂ ನ್ಯಾಷನಲ್ ಟ್ರಾನ್ಸ್ ಪೋರ್ಟೇಶನ್ ಸೇಫ್ಟಿ ಕಮಿಟಿ ಕಾರ್ಯಚರಣೆಯನ್ನು ಕೈಗೆತ್ತಿಕೊಂಡಿದೆ.
ಇದನ್ನೂ ಓದಿ: ಸ್ಯಾಮ್ ಬರೀ ಮರಳು ಮರುಭೂಮಿಯಲ್ಲ… ಚಲಿಸುವ ಮರಳು ದಿಬ್ಬಗಳ ನಾಡು