Advertisement

ಇಂಡೋನೇಶ್ಯ ಓಪನ್‌ ಸೂಪರ್‌: ಸೆಮಿಫೈನಲ್‌ ತಲುಪಿದ ಸಿಂಧು

11:09 PM Nov 26, 2021 | Team Udayavani |

ಬಾಲಿ (ಇಂಡೋನೇಶ್ಯ): ಭಾರೀ ಹೋರಾಟದ ಬಳಿಕ ಪಿ.ವಿ. ಸಿಂಧು “ಇಂಡೋನೇಶ್ಯ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌’ ಕೂಟದ ಸೆಮಿಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಶುಕ್ರವಾರದ ಕ್ವಾರ್ಟರ್‌ ಫೈನಲ್‌ ಕಾದಾಟದಲ್ಲಿ ಅವರು ದಕ್ಷಿಣ ಕೊರಿಯಾದ ಸಿಮ್‌ ಯುಜಿನ್‌ ವಿರುದ್ಧ 14-21, 21-19, 21-14 ಅಂತರದ ಮೇಲುಗೈ ಸಾಧಿಸಿ ನಿಟ್ಟುಸಿರೆಳೆದರು.

ಸಿಂಧು ಅವರ ಸೆಮಿಫೈನಲ್‌ ಎದುರಾಳಿ ಥಾಯ್ಲೆಂಡ್‌ನ‌ ರಚ ನೋಕ್‌ ಇಂತಾನನ್‌.

ಇದನ್ನೂ ಓದಿ:ಡಿ.6ಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತಕ್ಕೆ ಭೇಟಿ

ಚಿರಾಗ್‌-ಸಾತ್ವಿಕ್‌ ಮುನ್ನಡೆ
ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮಲೇಶ್ಯದ ಗೋಹ್‌ ಸೆ ಫಿ-ನೂರ್‌ ಇಜುದ್ದೀನ್‌ ಅವರನ್ನು 21-19, 21-19 ಅಂತರದಿಂದ ಮಣಿಸಿ ಸೆಮಿಫೈನಲ್‌ ತಲುಪಿದ್ದಾರೆ.

Advertisement

ಪುರುಷರ ಸಿಂಗಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್‌ ವಿಶ್ವದ ನಂ.1 ಆಟಗಾರ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ 12-21, 8-21 ಅಂತರದಿಂದ ಎಡವಿದರು.

Advertisement

Udayavani is now on Telegram. Click here to join our channel and stay updated with the latest news.

Next