ಜಕಾರ್ತ : ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಇಂಡೋನೇಶ್ಯ ಓಪನ್ ಸೂಪರ್ 1,000 ಕೂಟದ ಮೊದಲ ಸುತ್ತಿನಲ್ಲಿ ಸೋತು ಆಘಾತಕ್ಕೆ ಒಳಗಾಗಿದ್ದಾರೆ.
ಏಳನೇ ಶ್ರೇಯಾಂಕದ ಸಿಂಧು ವನಿತೆಯರ ಸಿಂಗಲ್ಸ್ನಲ್ಲಿ ಚೀನದ ಬಿಂಗ್ ಜಿಯಾವೊ ಅವರ ಕೈಯಲ್ಲಿ 14-21, 18-21 ನೇರ ಗೇಮ್ಗಳಲ್ಲಿ ಸೋತು ಹೊರಬಿದ್ದರು.
ಮಾಜಿ ವಿಶ್ವ ಚಾಂಪಿಯನ್ ಆಗಿರುವ ಸಿಂಧು ಕಳೆದ ಬ್ಯಾಡ್ಮಿಂಟನ್ ಏಷ್ಯ ಚಾಂಪಿಯನ್ಶಿಪ್ನಲ್ಲಿ ಜಿಯಾವೊ ಅವರನ್ನು ಸೋಲಿಸಿದ್ದರು.
ಪುರುಷರ ವಿಭಾಗದಲ್ಲಿ ಬಿ. ಸಾಯಿ ಪ್ರಣೀತ್ ಕೂಡ ಸೋತಿದ್ದಾರೆ. ಅವರು ಡೆನ್ಮಾರ್ಕ್ನ ಹಾನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ಅವರೆದುರು 16-21, 19-21 ಗೇಮ್ಗಳಿಂದ ಶರಣಾದರು.
ಮಿಕ್ಸೆಡ್ ಡಬಲ್ಸ್ನಲ್ಲಿ ಇಶಾನ್ ಭಟ್ನಾಗರ್ ಮತ್ತು ತನಿಷಾ ಕ್ರಾಸ್ಟೊ ಕೂಡ ಹಾಂಕಾಂಗ್ನ ಚಾಂಗ್ ತಾಕ್ ಚಿಂಗ್ ಮತ್ತು ವಿಂಗ್ ಯಂಗ್ ಹಾಂಗ್ ಅವರೆದುರು 14-21, 11-21 ಗೇಮ್ಗಳಿಂದ ಸೋತು ಹೊರಬಿದ್ದಿದ್ದಾರೆ.