Advertisement

ಪ್ರಶಸ್ತಿ ಉಳಿಸಿಕೊಳ್ಳುವರೇ ಶ್ರೀಕಾಂತ್‌?

06:00 AM Jul 03, 2018 | |

ಜಕಾರ್ತಾ: ಪ್ರತಿಷ್ಠಿತ ಇಂಡೋನೇಶ್ಯ ಓಪನ್‌ ಬ್ಯಾಡ್ಮಿಂಟನ್‌ ಮಂಗಳವಾರದಿಂದ ಆರಂಭಗೊಳ್ಳಲಿದೆ. ಹಾಲಿ ಚಾಂಪಿಯನ್‌ ಕೆ. ಶ್ರೀಕಾಂತ್‌ ಮತ್ತೂಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಪ್ರಶಸ್ತಿ ಉಳಿಸಿಕೊಳ್ಳು ಮಹತ್ವದ ಜವಾಬ್ದಾರಿ ಈ ಭಾರತೀಯ ಆಟಗಾರನ ಮೇಲಿದೆ. ಇವರೊಂದಿಗೆ, ಭಾರತದ ಅಗ್ರ ಆಟಗಾರರಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್‌, ಎಚ್‌. ಎಸ್‌. ಪ್ರಣಯ್‌ ಮೊದಲಾದವರು ಕೂಟದಲ್ಲಿ ಭಾಗವಹಿಸಲಿದ್ದಾರೆ.

Advertisement

12,50,000 ಡಾಲರ್‌ ಬಹುಮಾನದ ಈ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಶ್ರೀಕಾಂತ್‌, ಜಪಾನಿನ ಕೆಂಟೊ ಮೊಮೊಟ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಮೂರು ದಿನಗಳ ಹಿಂದಷ್ಟೇ ನಡೆದ್ದಿದ್ದ ಮಲೇಶ್ಯ ಓಪನ್‌ ಟೂರ್ನಿಯ ಪುರುಷರ ಸೆಮಿಫೈನಲ್‌ ಪಂದ್ಯ ದಲ್ಲಿ ಶ್ರೀಕಾಂತ್‌, ಮೊಮೊಟ ವಿರುದ್ಧವೇ ಸೆಣಸಿ ಸೋಲನುಭವಿಸಿದ್ದರು. ಹೀಗಾಗಿ ಶ್ರೀಕಾಂತ್‌ ಮೊದಲ ಸುತ್ತಿನಲ್ಲೇ ಭಾರೀ ಹೋರಾಟ ನಡೆಸಿ ಸೇಡು ತೀರಿಸಿಕೊಳ್ಳಲು ಮುಂದಾಗಬೇಕಿದೆ. 

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಎಚ್‌. ಎಸ್‌. ಪ್ರಣಯ್‌ ಅವರು ತಮ್ಮ ಮೊದಲ ಪಂದ್ಯದಲ್ಲಿ ಚೀನದ ಬಲಿಷ್ಠ ಆಟಗಾರ ಲಿನ್‌ ಡಾನ್‌ ವಿರುದ್ಧ ಕಣಕ್ಕಿಳಿಯುವರು. ಇದು ಪ್ರಣಯ್‌ ಪಾಲಿಗೆ ಕಠಿನ ಸವಾಲಾಗುವುದರಲ್ಲಿ ಅನುಮಾನವಿಲ್ಲ. ಬಿ. ಸಾಯಿ ಪ್ರಣೀತ್‌ ಚೈನೀಸ್‌ ತೈಪೆಯ ವಾಂಗ್‌ ತ್ಸು ವಿರುದ್ಧ, ಸಮೀರ್‌ ವರ್ಮ ಅವರು ಜರ್ಮ ನಿಯ ರಾಸ್ಮಸ್‌ ಗೆಮೆ ವಿರುದ್ಧ ಆಡಲಿದ್ದಾರೆ.

ವನಿತಾ ಸಿಂಗಲ್ಸ್‌ ಮುಖಾಮುಖಿ
ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತುಗಳಲ್ಲಿ, ಪಿ.ವಿ. ಸಿಂಧು ಅವರು ಥಾಯ್ಲೆಂಡ್‌ನ‌ ಪೊರ್ನ ಪವಿ ಚೊಚು ವೊಂಗ್‌ ವಿರುದ್ಧ, ಸೈನಾ ನೆಹ್ವಾಲ್‌ ಇಂಡೋನೇಶ್ಯದ ದಿನಾರ್‌ ಅಯುಸ್ಟಿನ್‌ ವಿರುದ್ಧ ಸೆಣ ಸಲಿದ್ದಾರೆ. 16ರ ಹರೆಯದ ವೈಷ್ಣವಿ ರೆಡ್ಡಿ ಕೂಡ ಈ ಕೂಟದಲ್ಲಿ ಸ್ಪರ್ಧಿಸಲಿದ್ದು,  ಡೆನ್ಮಾರ್ಕ್‌ನ ಲಿಜೆ ಜಾರ್ಸ್‌ಫೆಲ್ಟ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು.

Advertisement

Udayavani is now on Telegram. Click here to join our channel and stay updated with the latest news.

Next