Advertisement

ಉ.ಪ್ರ. 6ನೇ ಹಂತದ ಮತದಾನ : ಭಾರತ-ನೇಪಾಲ ಗಡಿ ಬಂದ್‌

07:46 PM Mar 03, 2017 | Team Udayavani |

ಮಹಾರಾಜ್‌ಗಂಜ್‌, ಉತ್ತರ ಪ್ರದೇಶ: ಏಳು ಹಂತಗಳ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದ ಮತದಾನ ಆರಂಭಕ್ಕೆ 24 ತಾಸುಗಳಿರುವಾಗಲೇ ಉತ್ತರಪ್ರದೇಶಕ್ಕೆ  ತಾಗಿಕೊಂಡಿರುವ ಭಾರತ – ನೇಪಾಲ ಗಡಿಯನ್ನು ಮುಚ್ಚಲಾಗಿದೆ. 

Advertisement

ನಾಳೆ, ಮಾರ್ಚ್‌ 4ರ ಶನಿವಾರದಂದು ಉತ್ತರ ಪ್ರದೇಶದ 49 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನಕ್ಕೆ 24 ತಾಸು ಮುನ್ನ 84 ಕಿ.ಮೀ. ಉದ್ದದ ಭಾರತ – ನೇಪಾಲ ಗಡಿಯನ್ನು ಮುಚ್ಚಲಾಗಿದ್ದು ಮತದಾನ ಮುಗಿಯುವ ತನಕವೂ ಅದು ಮುಚ್ಚಿರುತ್ತದೆ. ಈ ಅವಧಿಯಲ್ಲಿ ಕೇವಲ ತುರ್ತು ಸಂಚಾರದ ವಾಹನಗಳಿಗೆ ಮಾತ್ರವೇ ಗಡಿ ದಾಟಿ ಹೋಗಿ – ಬರಲು ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೀರೇಂದ್ರ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. 

ಮತದಾನದ ವೇಳೆ ಜನರ ಅಕ್ರಮ ಹಾಗೂ ಕಾನೂನು ಬಾಹಿರ ಸಂಚಾರವನ್ನು ತಡೆಯುವ ಸಲುವಾಗಿ ವ್ಯಾಪಾರ ವಹಿವಾಟು ಹಾಗೂ ಸಾಗಟ ತಾಣಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಹಾರಾಜಗಂಜ್‌ ಜಿಲ್ಲೆಯ ಭಾರತ – ನೇಪಾಲ ಗಡಿಯಲ್ಲಿನ ಸೋನೌಲಿ ತಾಣದಲ್ಲಿ ಈ ರೀತಿಯ ಎರಡು ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಲಾಗಿದೆ ಎಂದು ವೀರೇಂದ್ರ ಕುಮಾರ್‌ ಸಿಂಗ್‌ ತಿಳಿಸಿದರು. 

ಆರನೇ ಹಂತದಲ್ಲಿ  ನಾಳೆ ಶನಿವಾರ ಮತದಾನಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳೆಂದರೆ ಸಿಸ್ವಾ, ನೌತನ್ವಾ, ಫ್ರೆಂಡಾ, ಪನಿಯಾರಾ ಹಾಗೂ ಮಹಾರಾಜಾಗಂಜ್‌.

Advertisement

Udayavani is now on Telegram. Click here to join our channel and stay updated with the latest news.

Next