Advertisement

ನಾಳೆಯಿಂದ ಮೈಸೂರಿನಲ್ಲಿ ಇಂಡೋ ಇಂಟರ್‌ ನ್ಯಾಷನಲ್ ಕಬಡ್ಡಿ

03:52 PM May 23, 2019 | Team Udayavani |

ಮೈಸೂರು: ಇಂಡೋ ಇಂಟರ್‌ ನ್ಯಾಷನಲ್ ಕಬಡ್ಡಿ ಫೆಡರೇಷನ್‌ ಮತ್ತು ಡಿ ಸ್ಫೋರ್ಟ್ಸ್ ಸಹಯೋಗದಲ್ಲಿ ನಡೆಯುತ್ತಿರುವ ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್‌ ಕಬಡ್ಡಿ ಲೀಗ್‌ಗೆ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಪಂದ್ಯಾವಳಿ ಜಾಗತಿಕ ಗಮನ ಸೆಳೆದಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್‌ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ವಿ.ಪ್ರಸಾದ್‌ ಬಾಬು ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಕಡಿಮೆ ಅವಧಿಯಲ್ಲಿ ಇಂಡೋ ಇಂಟರ್‌ ನ್ಯಾಷನಲ್ ಪ್ರೀಮಿಯರ್‌ ಕಬಡ್ಡಿ ಲೀಗ್‌ಗೆ ಅತ್ಯುತ್ತಮ ಬೆಂಬಲ ವ್ಯಕ್ತವಾಗಿದೆ. ಕಬಡ್ಡಿ ಆಟಗಾರರಿಗೆ ಮಾನ್ಯತೆ ಜತೆಗೆ ಅರ್ಥಿಕವಾಗಿಯೂ ಅನುಕೂಲವಾಗುತ್ತಿದೆ.

ಪುಣೆಯ ಛತ್ರಪತಿ ಬಾಲೆವಾಡಿ ಒಳ ಕ್ರೀಡಾಂಗಣ ದಲ್ಲಿ ಪ್ರಾಥಮಿಕ ಹಂತದ ಪಂದ್ಯಗಳು 21ರವರೆಗೆ ನಡೆದಿದ್ದು, ಉತ್ತಮ ಪ್ರದರ್ಶನ ನೀಡುತ್ತಿರುವ ಆಟ ಗಾರರು ಇದೀಗ ಮೈಸೂರು ಮತ್ತು ಬೆಂಗಳೂರಿನಲ್ಲಿ ಎರಡು ಮತ್ತು ಮೂರನೇ ಹಂತದ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿದ್ದಾರೆ.

ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಎರಡನೇ ಹಂತದ ಪಂದ್ಯಗಳು 24 ರಿಂದ 29ರವರೆಗೆ ನಡೆಯಲಿದೆ. ಶುಕ್ರವಾರ ಸಂಜೆ 6 ಗಂಟೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನೀಡಲಿದ್ದು, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌ ಹಾಗೂ ಶಾಸಕ ಎಸ್‌.ಎ.ರಾಮದಾಸ್‌, ಪಾಲಿಕೆ ಮೇಯರ್‌ ಪುಷ್ಪಲತಾ ಜಗನ್ನಾಥ್‌, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಪಂದ್ಯಗಳು ಡಿಡಿ ನ್ಪೋರ್ಟ್ಸ್, ಡಿ ನ್ಪೋರ್ಟ್ಸ್, ಎಂಟಿವಿ ಸೇರಿದಂತೆ ಅನೇಕ ಪ್ರಾದೇಶಿಕ ವಾಹಿನಿಗಳು ಪಂದ್ಯಾವಳಿಯನ್ನು ನೇರ ಪ್ರಸಾರ ಮಾಡುತ್ತಿವೆ ಎಂದು ಹೇಳಿದರು.

Advertisement

ಮೇ 24 ರಂದು ಮೈಸೂರಿನಲ್ಲಿ ಪುಣೆ ಪ್ರೖಡ್‌-ಪಾಂಡಿಚೇರಿ ಪ್ರಿಡೇಟರ್, ಹರಿಯಾಣ ರೋಸ್‌ – ಬೆಂಗಳೂರು ರಿನೋಸ್‌, ದಿಲ್ಲಾರೆ ದೆಹಲಿ – ತೆಲುಗು ಬುಲ್ಸ್ ನಡುವೆ ಹಣಾಹಣಿ ನಡೆಯಲಿದೆ. 25 ರಂದು ಮಹಿಳೆಯರ ಸಿ ಮತ್ತು ಮಹಿಳೆಯರ ಡಿ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಚೆನ್ನೈ ಚಾಲೆಂಜರ್ ಮತ್ತು ಮುಂಬೈ ಚೆ ರಾಜೆ ಮತ್ತು ಹರಿಯಾಣ ರೋಸ್‌ – ದಿಲ್ಲಾರ್‌ ದಿಲ್ಲಿ ನಡುವೆ ಪಂದ್ಯ ಆಯೋಜನೆಗೊಂಡಿದೆ.

ಮೇ 26ರಂದು ಪುಣೆ ಪ್ರೖಡ್‌ – ಚೆನ್ನೈ ಚಾಲೆಂಜರ್, ಬೆಂಗಳೂರು ರಿನೋಸ್‌ – ತೆಲುಗು ಬುಲ್ಸ್, ಪಾಂಡಿಚೇರಿ ಪ್ರಿಡೇಟರ್-ಮುಂಬೈ ಚೆ ರಾಜೆ ನಡುವೆ ಸ್ಪರ್ಧೆಗೆ ಅಖಾಡ ಅಣಿಯಾಗಿದೆ. ಮೇ 27 ರಂದು ಹರಿಯಾಣ ರೋಸ್‌ – ತೆಲುಗು ಬುಲ್ಸ್, ಬೆಂಗಳೂರು ರಿನೋಸ್‌ – ದಿಲ್ಲಾರ್‌ ದೆಹಲಿ, ಪುಣೆ ಪ್ರೖಡ್‌ – ಮುಂಬೈ ಚೆ ರಾಜೆ ತಂಡಗಳ ನಡುವೆ ಹಣಾ ಹಣಿಗೆ ವೇದಿಕೆ ಸಿದ್ಧವಾಗಿದೆ.

ಮೇ 28 ರಂದು ಪಾಂಡಿಚೇರಿ ಪ್ರಿಡೇಟರ್ – ಚೆನ್ನೀ ಚಾಲೆಂಜರ್, ಬೆಂಗಳೂರು ರಿನೋಸ್‌ – ಮುಂಬೈ ಚೆ ರಾಜ, ಪುಣೆ ಪ್ರೖಡ್‌ ಮತ್ತು ಗೆಲುಗು ಬುಲ್ಸ್, ಕೊನೆಯ ದಿನವಾದ ಮೇ 29 ರಂದು ಹರಿಯಾಣ ರೋಸ್‌ – ಚೆನ್ನೈ ಚಾಲೆಂಜರ್, ಪುಣೆ ಪ್ರೖಡ್‌ – ದಿಲ್ಲಾರ್‌ ದೆಹಲಿ ಹಾಗೂ ಅಂತಿಮ ಪಂದ್ಯ ಪಾಂಡಿಚೇರಿ ಪ್ರಿಡೇಟರ್ – ತೆಲುಗು ಬುಲ್ಸ್ ನಡುವೆ ಏರ್ಪಟ್ಟಿದೆ.

ಮೂರನೇ ಹಾಗೂ ಕೊನೆಯ ಹಂತದ ಪಂದ್ಯ ಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂನ್‌ 1ರಿಂದ 4ರವರೆಗೆ ನಡೆಯಲಿದೆ. ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗಳನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಈ ಅಂತಿಮ ಹಂತದ ಪಂದ್ಯಗಳಲ್ಲಿ ರಾಜ್ಯಪಾಲ ವಜು ಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಹಿಮಾಚಲ ಪ್ರದೇಶದ ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಸಾದ್‌ ಬಾಬು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next