Advertisement

ಮತ್ತೊಮ್ಮೆ ಇಂಡೋ ಚೈನಾ ಸಂಘರ್ಷ: ಅ.ಪ್ರದೇಶದಲ್ಲಿ 200 ಚೀನಾ ಸೈನಿಕರನ್ನು ತಡೆದ ಭಾರತೀಯ ಸೈನ್ಯ

09:02 AM Oct 08, 2021 | Team Udayavani |

ಹೊಸದಿಲ್ಲಿ: ಭಾರತೀಯ ಸೈನ್ಯ ಮತ್ತು ಚೀನಾದ ಸೈನ್ಯಗಳ ನಡುವೆ ಮತ್ತೊಮ್ಮೆ ಮುಖಾಮುಖಿ ಸಂಘರ್ಷ ನಡೆದಿದೆ. ಕಳೆದ ವಾರ ನಡೆದ ಈ ಸಂಘರ್ಷದಲ್ಲಿ ಭಾರತೀಯ ಸೈನ್ಯವು ಅರುಣಾಚಲ ಪ್ರದೇಶದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ ಎಸಿ) ಬಳಿ ಸುಮಾರು 200 ಮಂದಿ ಚೀನಿ ಸೈನಿಕರನ್ನು ತಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಕಳೆದ ವಾರ ಚೀನಾದ ಗಡಿಯ ಹತ್ತಿರ ವಾಡಿಕೆಯ ಗಸ್ತು ತಿರುಗುತ್ತಿರುವಾಗ ಭಾರತ ಮತ್ತು ಚೀನೀ ಸೈನಿಕರ ನಡುವೆ ಮುಖಾಮುಖಿ ಸಂಭವಿಸಿದೆ. ಮೂಲಗಳ ಪ್ರಕಾರ ಭಾರತೀಯ ಸೇನೆಯು ಸುಮಾರು 200 ಚೀನೀ ಸೈನಿಕರನ್ನು ಗಡಿಯ ಸಮೀಪದಲ್ಲಿ ತಡೆದಿದೆ.

ನಂತರ, ಸ್ಥಳೀಯ ಕಮಾಂಡರ್‌ಗಳು ಸಮಸ್ಯೆಯನ್ನು ಪರಿಹರಿಸಿದ ನಂತರ ಎರಡೂ ಕಡೆಯ ಸೈನ್ಯಗಳು ಬೇರ್ಪಟ್ಟವು.

ಉಭಯ ಪಕ್ಷಗಳ ನಡುವಿನ ಮುಖಾಮುಖಿಯು ಕೆಲವು ಗಂಟೆಗಳ ಕಾಲ ನಡೆಯಿತು. ಅಸ್ತಿತ್ವದಲ್ಲಿರುವ ಪ್ರೋಟೋಕಾಲ್‌ ಗಳ ಪ್ರಕಾರ ಪರಿಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಖಾಮುಖಿಯ ಸಮಯದಲ್ಲಿ ಭಾರತೀಯ ರಕ್ಷಣೆಗೆ ಯಾವುದೇ ಹಾನಿಯಾಗಿಲ್ಲ.

ಇದನ್ನೂ ಓದಿ:ಎಷ್ಟು ಜನರನ್ನು ಬಂಧಿಸಿದ್ದೀರಿ? : ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

Advertisement

ಏತನ್ಮಧ್ಯೆ, ದ್ವಿಪಕ್ಷೀಯ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳಿಗೆ ಬದ್ಧವಾಗಿರುವಾಗ ಪೂರ್ವ ಲಡಾಖ್‌ನ ಗಡಿಗಳಲ್ಲಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಚೀನಾ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ಭಾರತ ಗುರುವಾರ ಹೇಳಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಚೀನಾದ ಕಡೆಯಿಂದ “ಪ್ರಚೋದನಕಾರಿ” ನಡವಳಿಕೆ ಮತ್ತು “ಏಕಪಕ್ಷೀಯ” ಕ್ರಮಗಳು ಈ ಪ್ರದೇಶದಲ್ಲಿ ಶಾಂತಿಗೆ ಭಂಗ ತಂದಿದೆ ಎಂದು ಭಾರತ ಪುನರುಚ್ಚರಿಸಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next