Advertisement

Indo-Canada: ಭಾರತದ ಜತೆಗೆ ಉತ್ತಮ ಬಾಂಧವ್ಯ ಬೇಕು ಎಂದ ಟ್ರೂಡ್ನೂ

10:11 PM Oct 04, 2023 | Team Udayavani |

ಟೊರೊಂಟೊ: ಖಲಿಸ್ತಾನಿ ಉಗ್ರ ಹದೀìಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಭಾರತದ ವಿರುದ್ಧ ವೃಥಾ ಆರೋಪ ಮಾಡಿದ್ದ ಕೆನಡಾ ಸರ್ಕಾರ ಇದೀಗ ಮೆತ್ತಗಾಗಿದೆ. ಭಾರತದ ಜತೆಗೆ ಸಮಸ್ಯೆ ಹೆಚ್ಚಿಸಿಕೊಳ್ಳಲು ಇಷ್ಟವಿಲ್ಲ, ನಾವು ರಾಜತಾಂತ್ರಿಕವಾಗಿ ರಹಸ್ಯ ಮಾತುಕತೆ ನಡೆಸಲು ಬಯಸುತ್ತಿದ್ದೇವೆ ಎಂದಿದೆ.

Advertisement

ರಾಯಭಾರಿಗಳ ವಾಪಸ್‌ ವಿಚಾರದ ಬಗ್ಗೆ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಪ್ರತಿಕ್ರಿಯಿಸಿ, ನಮ್ಮ ರಾಯಭಾರಿಗಳ ಭದ್ರತೆಯ ವಿಚಾರ ಆದ್ಯೆತಯದ್ದಾಗಿದೆ. ಈ ಹಿನ್ನೆಲೆಯಲ್ಲಿ ನಾವು ಭಾರತದೊಂದಿಗೆ ಗೌಪ್ಯ ರಾಜತಾಂತ್ರಿಕ ಮಾತುಕತೆ ನಡೆಸಲು ಬಯಸಿದ್ದೇವೆ ಎಂದಿದ್ದಾರೆ.

ನಿಜ್ಜರ್‌ ಹತ್ಯೆಗೆ ಭಾರತವನ್ನು ಹೊಣೆಯಾಗಿಸಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಆಧಾರರಹಿತ ಆರೋಪ ಮಾಡಿದ್ದ ಬೆನ್ನಲ್ಲೇ, ಭಾರತ ಸರ್ಕಾರ ಭಾರತದಲ್ಲಿರುವ ಕೆನಡಾದ 40 ರಾಜತಾಂತ್ರಿಕರನ್ನು ಅ.10ರ ಒಳಗಾಗಿ ವಾಪಸ್‌ ಕರೆಸಿಕೊಳ್ಳುವಂತೆ ಸೂಚನೆ ನೀಡಿತು. ಈ ಬೆನ್ನಲ್ಲೇ ಆ ದೇಶದ ಪ್ರಧಾನಿ ಜಸ್ಟಿನ್‌ ಟ್ರೂಡ್ನೂ “ನಮಗೆ ಭಾರತದ ಜತೆಗೆ ಸಮಸ್ಯೆ ಉಲ್ಬಣಗೊಳಿಸಿಕೊಳ್ಳಲು ಇಷ್ಟವಿಲ್ಲ. ಜವಾಬ್ದಾರಿಯುತವಾಗಿ, ರಚನಾತ್ಮಕವಾಗಿ ಭಾರತದೊಂದಿಗೆ ಸಂಬಂಧ ಮುಂದುವರಿಸಲು ಬಯಸುತ್ತೇವೆ.’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next