Advertisement
ಬೆಂಗಳೂರಿನಲ್ಲಿ ಏರೋ ಇಂಡಿಯಾ 2021ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಡೋ ಪೆಸಿಫಿಕ್ ವಲಯದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಹಭಾಗಿತ್ವಕ್ಕೆ ಅಮೆರಿಕ ಒತ್ತು ಕೊಡುವುದರ ಪ್ರತೀಕವಾಗಿ ಅಮೆರಿಕದ ವಿವಿಧ ವಿಭಾಗಗಳ ಉನ್ನತ ಅಧಿಕಾರಿಗಳನ್ನೊಳಗೊಂಡ 100 ಜನರ ನಿಯೋಗವು ಏರೋ ಇಂಡಿಯಾ 2021 ರಲ್ಲಿ ಭಾಗವಹಿಸುತ್ತಿದೆ.
Related Articles
Advertisement
ಬಳಿಕ ಮಾತನಾಡಿದ ಅಮೆರಿಕದ ವಾಯುಪಡೆಯ ಅಂತರರಾಷ್ಟ್ರೀಯ ವ್ಯವಹಾರಗಳ ಉಪ ಅಧೀನ ಕಾರ್ಯದರ್ಶಿ ಮಿಸ್ ಕೆಲ್ಲಿ ಎಲ್ ಸೇಬಾಲ್ಟ್ ಅವರು, “ಇಂಡೊ ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತ ನಮಗೆ ಅತಿ ಮುಖ್ಯ ರಕ್ಷಣಾ ಸಹಭಾಗಿಗಳಾಗಿರುವ ದೇಶಗಳಲ್ಲಿ ಒಂದಾಗಿದೆ. ಕೆಲವು ಉಪಕ್ರಮಗಳು, ಸಹಭಾಗಿತ್ವದ ಒಪ್ಪಂದಗಳು, ಅಮೆರಿಕದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹಾಗೂ ವೇದಿಕೆಗಳನ್ನು ಭಾರತದ ಸಶಸ್ತ್ರ ಸೇವೆಗಳಲ್ಲಿ ಬಳಸಲು ಸಹಾಯ ಮಾಡುವ ಮೂಲಕ ಈ ರಕ್ಷಣಾ ಸಂಬಂಧಗಳನ್ನು ಇನ್ನೂ ಹೆಚ್ಚು ಗಟ್ಟಿಯಾಗಿಸುತ್ತಿದ್ದೇವೆ ಎಂದಿದ್ದಾರೆ.”
11ನೇ ಏರ್‌ಫೋರ್ಸ್ ಕಮಾಂಡರ್ ಅವರು ಅಮೆರಿಕ ಮತ್ತು ಭಾರತದ ನಡುವಿನ ಸಹಭಾಗಿತ್ವದ ಬದ್ಧತೆಗೆ ಏರೋ ಇಂಡಿಯಾ ಮತ್ತೊಂದು ಉತ್ತಮ ಉದಾಹರಣೆ, “ ಬದಲಾಗುತ್ತಿರುವ ಅಂತರರಾಷ್ಟ್ರೀಯ ಪರಿಸರದಲ್ಲಿ ಅದರಲ್ಲೂ ಕಳೆದ ವರ್ಷ ಅಮೆರಿಕ ಮತ್ತು ಭಾರತದ ಸಹಭಾಗಿತ್ವವು ಮತ್ತಷ್ಟು ಮಹತ್ವ ಪಡೆದು ಕೊಂಡಿದೆ,”ಎಂದು ಲೆಫ್ಟಿನೆಂಟ್ ಜನರಲ್ ಡೇವಿಡ್ ಎ. ಕ್ರಮ್ ಹೇಳಿದ್ದಾರೆ.
ಇದನ್ನೂ ಓದಿ:ಮುಂಬೈ: ಗೋರೆಗಾಂವ್ ಸ್ಟುಡಿಯೋದಲ್ಲಿ ಅಗ್ನಿ ಅವಘಡ; ಸಾವು, ನೋವು ಸಂಭವಿಸಿಲ್ಲ
ಏರೋ ಇಂಡಿಯಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ B-1B ಲ್ಯಾನ್ಸರ್ ಹೆವಿ ಬಾಂಬರ್ ಫೆಬ್ರವರಿ 3 ರ ಉದ್ಘಾಟನಾ ದಿನದಂದು ಕಸರತ್ತು ಪ್ರದಶಿಸಲಿವೆ, ಭಾರತ ಸ್ವಾತಂತ್ರಾ ನಂತರ ಇದೇ ಮೊದಲ ಬಾರಿಗೆ ಅಮೆರಿಕದ B-1B ಬಾಂಬರ್ ಭಾರತದ ನೆಲದ ಮೇಲೆ ಕಾಣಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಲಿದೆ.
B-1, 28ನೇ ಬಾಂಬ್ ವಿಂಗ್, ಎಲ್ಸ್ ವರ್ತ್ ಏರ್ ಫೋರ್ಸ್ ಬೇಸ್, ಸೌತ್ ಡಕೋಟದ ವಿಮಾನವಾಗಿದ್ದು ಈ B-1B ಲ್ಯಾನ್ಸರ್ ಸೂಪರ್ ಸಾನಿಕ್ ಹೆವಿ ಬಾಂಬರ್ ಆಗಿದೆ. ಇದೊಂದು ಅದ್ಭುತ ವಿಮಾನ. ಇದು ಜಗತ್ತಿನ ಎಲ್ಲಡೆ ಅಮೆರಿಕಕ್ಕೆ ಸೇರಿದ ಬೇಸ್ ಗಳಿಂದ ಹಾಗೂ ಫಾರ್ವರ್ಡ್-ಡಿಪ್ಲಾಯ್ಡ್ ಜಾಗಗಳಿಂದ ಕೂಡ ಮಿಷನ್ ಗಳನ್ನು ಸಫಲಗೊಳಿಸುವ ಸಾಮರ್ಥ್ಯ ಹೊಂದಿದೆ.