Advertisement

Forest; ಮೀಸಲು ಅರಣ್ಯ ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಖಂಡ್ರೆ

10:54 PM Feb 06, 2024 | Team Udayavani |

ಮಂಗಳೂರು: ಅರಣ್ಯ ಪ್ರದೇಶ ಒತ್ತುವರಿದಾರರನ್ನು ಗುರುತಿಸಲು ಅರಣ್ಯ, ಕಂದಾಯ ಇಲಾಖೆ ಜಂಟಿಯಾಗಿ ಸಮೀಕ್ಷೆ ಕೈಗೊಳ್ಳಲಿದ್ದು, ಮೀಸಲು ಅರಣ್ಯ ಒತ್ತುವರಿದಾರ ರನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸ ಲಾಗುವುದು ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಈಗಾಗಲೇ ಆರಂಭವಾಗಿದೆ. ದಕ್ಷಿಣ ಕನ್ನಡದಲ್ಲೂ ಆರಂಭಿಸಲು ಆಧಿಕಾರಿ ಗಳಿಗೆ ಸೂಚಿಸಲಾಗಿದೆ. 3 ಎಕ್ರೆಗಿಂತ ಕಡಿಮೆ ಪ್ರದೇಶದಲ್ಲಿ ಅರಣ್ಯ ಒತ್ತುವರಿ ಮಾಡಿ ಬೇಸಾಯ ಮಾಡಿಕೊಂಡಿರುವ ರೈತರಿಗೆ ತೊಂದರೆ ಆಗದಂತೆ ಒತ್ತುವರಿ ತೆರವು ಮಾಡಲಾಗುವುದು ಎಂದರು.

ಕೆಲವು ಕಡೆ ಪಟ್ಟಾ ಜಮೀನು ಹಾಗೂ ಕಂದಾಯ ಭೂಮಿ ಅರಣ್ಯ ಇಲಾಖೆಗೆ ಸೇರ್ಪಡೆಯಾಗಿರುವ ದೂರುಗಳಿದ್ದು, ಜಂಟಿ ಸಮೀಕ್ಷೆಯಲ್ಲಿ ಅವುಗಳನ್ನೂ ಪತ್ತೆ ಹಚ್ಚುವುದಾಗಿ ತಿಳಿಸಿದರು.

ಅರಣ್ಯ ಒತ್ತುವರಿ ಇತ್ತೀಚೆಗೆ ಹೆಚ್ಚಾಗು ತ್ತಿದೆ. ಕೆಲವರು ಶುಂಠಿ ಬೆಳೆಯುವ ಹೆಸರಲ್ಲಿ ಕೆಲವು ಎಕ್ರೆ ಭೂಮಿಯನ್ನು ಗುತ್ತಿಗೆ ಪಡೆದು ಅಥವಾ ಖರೀದಿಸಿ ಸುತ್ತಮುತ್ತಲಿನ ಅರಣ್ಯ ನಾಶಮಾಡುತ್ತಿದ್ದಾರೆ ಎಂಬ ದೂರಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಲ ಕಾಲಕ್ಕೆಉಪಗ್ರಹ ಚಿತ್ರಗಳ ಮೂಲಕ ಪರಿಶೀಲಿಸಿ ಅರಣ್ಯನಾಶ ಪಡಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆದರೆ 1978ರಲ್ಲಿ ಅರಣ್ಯ ಸಂರಕ್ಷಣಕಾಯಿದೆ ಜಾರಿಗೆ ಬರುವ ಮೊದಲು 3ಎಕ್ರೆಗಿಂತ ಕಡಿಮೆ ಭೂಮಿಯಲ್ಲಿ ಉಳಿಮೆ ಮಾಡುತ್ತಿರುವ ಮತ್ತು ಸಣ್ಣ ಮನೆ ಕಟ್ಟಿಕೊಂಡು ವಾಸವಿರುವ‌ ಜನರನ್ನು ಅರಣ್ಯದಿಂದ ಒಕ್ಕಲೆಬ್ಬಿಸದಂ ತೆಯೂ ಸೂಚಿಸಲಾಗಿದೆ. ಬದಲಾಗಿ ಹತ್ತಾರು ಎಕ್ರೆ ಭೂಮಿಯನ್ನು ಒತ್ತುವರಿ ಮಾಡಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಆನ್‌ಲೈನ್‌ ಮೂಲಕ
ಮಾತ್ರ ಚಾರಣ ಅನುಮತಿ
ಏಕಕಾಲಕ್ಕೆ ಸಾವಿರಾರು ಸಂಖ್ಯೆಯಲ್ಲಿಜನ ಅರಣ್ಯದೊಳಗೆ ಬಂದರೆ ವನ್ಯಜೀವಿಗಳು, ಪರಿಸರಕ್ಕೆ ತೊಂದರೆಯಾಗುವುದರಿಂದ ಕುಮಾರ ಪರ್ವತ ಸೇರಿದಂತೆ ಎಲ್ಲ ಚಾರಣ ತಾಣಗಳಿಗೂ ದಿನಕ್ಕೆ ಚಾರಣಿಗರ ಸಂಖ್ಯೆಯನ್ನು ನಿಗದಿಗೊಳಿಸ ಲಾಗುವುದು. ಅದಕ್ಕೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸುವ ಬಗ್ಗೆ ಶೀಘ್ರವೇ ನಿರ್ಣಯ ತೆಗೆದು ಕೊಳ್ಳುತ್ತೇವೆ ಎಂದರು.

Advertisement

ಸಿಆರ್‌ಝಡ್‌ ಉಲ್ಲಂಘನೆ
ರಾಜ್ಯದ ಕಡಲ ತೀರಗಳಲ್ಲಿ ಕರಾವಳಿ ನಿಯಂತ್ರಣ ವಲಯ ಉಲ್ಲಂಘನೆಯ ದೂರುಗಳಿವೆ. ಕೆಲವರು ಸಿಆರ್‌ಝಡ್‌ ಬರುವ ಮೊದಲೇ ಕಟ್ಟಡ ಕಟ್ಟಿಕೊಂಡಿದ್ದಾರೆ, ಕೆಲವರು ಅನಂತರ ಉಲ್ಲಂ ಸಿದ್ದಾರೆ. ಈ ಬಗ್ಗೆಯೂ ವರದಿ ನೀಡಲು ಸೂಚಿಸಿದ್ದು, ಕಡಲ್ಕೊರೆತ ಸಮಸ್ಯೆಗೆ ಪರಿಹಾರ ರೂಪದಲ್ಲಿ ಕಾಂಡ್ಲಾ ವನಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ನಿರ್ಧರಿಸಲಾಗಿದೆ ಎಂದರು.

ಕಾಳ್ಗಿಚ್ಚು ನಿಯಂತ್ರಣಕ್ಕೆ ಕಾಪ್ಟರ್‌
ಈ ಬಾರಿ ಬೇಸಗೆ ತೀವ್ರವಾಗಿರುವ ಸಾಧ್ಯತೆ ಇದ್ದು, ಕಾಳ್ಗಿಚ್ಚಿನ ಸಮಸ್ಯೆಯೂ ಇರಬಹುದು. ಅದರ ನಿಯಂತ್ರಣಕ್ಕೆ ಅಗತ್ಯವಿದ್ದರೆ ಕೆಲವು ಖಾಸಗಿ ಸಂಸ್ಥೆಗಳ ಮೂಲಕ ಹೆಲಿಕಾಪ್ಟರ್‌ ಬಳಸಲೂ ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಳ್ಗಿಚ್ಚು ನಿಯಂತ್ರಣಕ್ಕಾಗಿ ಬೆಂಕಿ ರೇಖೆಗಳನ್ನು ನಿರ್ಮಿಸುವುದು, ಅಗ್ನಿಶಾಮಕ ಇಲಾಖೆಯ ಜತೆಗೂಡಿ ಕಾರ್ಯಾಚರಣೆ ನಡೆಸುವುದಕ್ಕೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕೆ-ಶೋರ್‌ ಯೋಜನೆ
ನದಿಗಳ ಮೂಲಕ ಪ್ಲಾಸ್ಟಿಕ್‌ ತ್ಯಾಜ್ಯ ಸಮುದ್ರಕ್ಕೆ ಸೇರಿ ಮಲಿನವಾಗುವುದನ್ನು ತಡೆಯಲು ವಿಶ್ವಬ್ಯಾಂಕ್‌ ನೆರವಿನೊಂ ದಿಗೆ ಈಗಾಗಲೇ ಕೆ-ಶೋರ್‌ (ಕರ್ನಾಟಕ-ಸಾಗರ ಸಂಪನ್ಮೂಲಗಳ ಮೇಲ್ಮೈ ಸುಸ್ಥಿರ ಕೊçಲು) ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾ ಗಿದೆ ಎಂದು ವಿವರಿಸಿದರು.

ಏಕಬಳಕೆ ಪ್ಲಾಸ್ಟಿಕ್‌ ನಿರ್ಮೂಲನೆಗೆ ತೀರ್ಮಾನಿಸಿದ್ದು, ದಕ್ಷಿಣ ಕನ್ನಡವೂ ಸೇರಿದಂತೆ (ಧರ್ಮಸ್ಥಳ) 5 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನು ಬೃಹತ್‌ ಮಟ್ಟದಲ್ಲಿ ಅನುಷ್ಠಾನ ಮಾಡ ಲಾಗುವುದು ಎಂದು ಹೇಳಿದರು.

ವಾಚರ್‌ಗಳಿಗೆ ಪ್ರೋತ್ಸಾಹ ಧನ
ಅರಣ್ಯ ಇಲಾಖೆ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ವಾಚರ್‌ಗಳಾಗಿ ವವರಿಗೆ ಮಾಸಿಕವಾಗಿ ಪ್ರೋತ್ಸಾಹಧನ ವನ್ನು ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next