Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಈಗಾಗಲೇ ಆರಂಭವಾಗಿದೆ. ದಕ್ಷಿಣ ಕನ್ನಡದಲ್ಲೂ ಆರಂಭಿಸಲು ಆಧಿಕಾರಿ ಗಳಿಗೆ ಸೂಚಿಸಲಾಗಿದೆ. 3 ಎಕ್ರೆಗಿಂತ ಕಡಿಮೆ ಪ್ರದೇಶದಲ್ಲಿ ಅರಣ್ಯ ಒತ್ತುವರಿ ಮಾಡಿ ಬೇಸಾಯ ಮಾಡಿಕೊಂಡಿರುವ ರೈತರಿಗೆ ತೊಂದರೆ ಆಗದಂತೆ ಒತ್ತುವರಿ ತೆರವು ಮಾಡಲಾಗುವುದು ಎಂದರು.
Related Articles
ಮಾತ್ರ ಚಾರಣ ಅನುಮತಿ
ಏಕಕಾಲಕ್ಕೆ ಸಾವಿರಾರು ಸಂಖ್ಯೆಯಲ್ಲಿಜನ ಅರಣ್ಯದೊಳಗೆ ಬಂದರೆ ವನ್ಯಜೀವಿಗಳು, ಪರಿಸರಕ್ಕೆ ತೊಂದರೆಯಾಗುವುದರಿಂದ ಕುಮಾರ ಪರ್ವತ ಸೇರಿದಂತೆ ಎಲ್ಲ ಚಾರಣ ತಾಣಗಳಿಗೂ ದಿನಕ್ಕೆ ಚಾರಣಿಗರ ಸಂಖ್ಯೆಯನ್ನು ನಿಗದಿಗೊಳಿಸ ಲಾಗುವುದು. ಅದಕ್ಕೆ ಆನ್‌ಲೈನ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಶೀಘ್ರವೇ ನಿರ್ಣಯ ತೆಗೆದು ಕೊಳ್ಳುತ್ತೇವೆ ಎಂದರು.
Advertisement
ಸಿಆರ್‌ಝಡ್ ಉಲ್ಲಂಘನೆರಾಜ್ಯದ ಕಡಲ ತೀರಗಳಲ್ಲಿ ಕರಾವಳಿ ನಿಯಂತ್ರಣ ವಲಯ ಉಲ್ಲಂಘನೆಯ ದೂರುಗಳಿವೆ. ಕೆಲವರು ಸಿಆರ್‌ಝಡ್ ಬರುವ ಮೊದಲೇ ಕಟ್ಟಡ ಕಟ್ಟಿಕೊಂಡಿದ್ದಾರೆ, ಕೆಲವರು ಅನಂತರ ಉಲ್ಲಂ ಸಿದ್ದಾರೆ. ಈ ಬಗ್ಗೆಯೂ ವರದಿ ನೀಡಲು ಸೂಚಿಸಿದ್ದು, ಕಡಲ್ಕೊರೆತ ಸಮಸ್ಯೆಗೆ ಪರಿಹಾರ ರೂಪದಲ್ಲಿ ಕಾಂಡ್ಲಾ ವನಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ನಿರ್ಧರಿಸಲಾಗಿದೆ ಎಂದರು. ಕಾಳ್ಗಿಚ್ಚು ನಿಯಂತ್ರಣಕ್ಕೆ ಕಾಪ್ಟರ್
ಈ ಬಾರಿ ಬೇಸಗೆ ತೀವ್ರವಾಗಿರುವ ಸಾಧ್ಯತೆ ಇದ್ದು, ಕಾಳ್ಗಿಚ್ಚಿನ ಸಮಸ್ಯೆಯೂ ಇರಬಹುದು. ಅದರ ನಿಯಂತ್ರಣಕ್ಕೆ ಅಗತ್ಯವಿದ್ದರೆ ಕೆಲವು ಖಾಸಗಿ ಸಂಸ್ಥೆಗಳ ಮೂಲಕ ಹೆಲಿಕಾಪ್ಟರ್ ಬಳಸಲೂ ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಳ್ಗಿಚ್ಚು ನಿಯಂತ್ರಣಕ್ಕಾಗಿ ಬೆಂಕಿ ರೇಖೆಗಳನ್ನು ನಿರ್ಮಿಸುವುದು, ಅಗ್ನಿಶಾಮಕ ಇಲಾಖೆಯ ಜತೆಗೂಡಿ ಕಾರ್ಯಾಚರಣೆ ನಡೆಸುವುದಕ್ಕೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಕೆ-ಶೋರ್ ಯೋಜನೆ
ನದಿಗಳ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರಕ್ಕೆ ಸೇರಿ ಮಲಿನವಾಗುವುದನ್ನು ತಡೆಯಲು ವಿಶ್ವಬ್ಯಾಂಕ್ ನೆರವಿನೊಂ ದಿಗೆ ಈಗಾಗಲೇ ಕೆ-ಶೋರ್ (ಕರ್ನಾಟಕ-ಸಾಗರ ಸಂಪನ್ಮೂಲಗಳ ಮೇಲ್ಮೈ ಸುಸ್ಥಿರ ಕೊçಲು) ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾ ಗಿದೆ ಎಂದು ವಿವರಿಸಿದರು. ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆಗೆ ತೀರ್ಮಾನಿಸಿದ್ದು, ದಕ್ಷಿಣ ಕನ್ನಡವೂ ಸೇರಿದಂತೆ (ಧರ್ಮಸ್ಥಳ) 5 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನು ಬೃಹತ್ ಮಟ್ಟದಲ್ಲಿ ಅನುಷ್ಠಾನ ಮಾಡ ಲಾಗುವುದು ಎಂದು ಹೇಳಿದರು. ವಾಚರ್‌ಗಳಿಗೆ ಪ್ರೋತ್ಸಾಹ ಧನ
ಅರಣ್ಯ ಇಲಾಖೆ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ವಾಚರ್‌ಗಳಾಗಿ ವವರಿಗೆ ಮಾಸಿಕವಾಗಿ ಪ್ರೋತ್ಸಾಹಧನ ವನ್ನು ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದರು.