Advertisement
ನಗರದಲ್ಲಿ ಸೆ.19ರ ಗುರುವಾರ ರಾತ್ರಿ ನಡೆದ ಜನತಾ ರಾಜ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕಾಂಗ್ರೆಸ್ ಸರ್ಕಾರದ ಹಲವಾರು ಭ್ರಷ್ಟಾಚಾರದ ಕೃತ್ಯದಿಂದ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಇನ್ನು 6 ತಿಂಗಳಲ್ಲಿ ಸರ್ಕಾರ ಪತನಗೊಳ್ಳಲಿದ್ದು, ನಮ್ಮ ಆಡಳಿತಾವಧಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದರು.
Related Articles
Advertisement
ನಾಗಮಂಗಲದಲ್ಲಿ ಗಣೇಶ ಮೂರ್ತಿಯನ್ನು ಪೊಲೀಸ್ ವಾಹನದಲ್ಲಿ ಕೊಂಡ್ಯೊಯುತ್ತಾರೆ. ನಿಮಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ದೇಶದ ಅನ್ನ ತಿಂದು ನಮ್ಮ ಕಾನೂನು ಗೌರವಿಸುವ ಪ್ರತಿಯೊಂದು ಮುಸ್ಲಿಮನನ್ನು ನಾವು ಗೌರವಿಸುತ್ತೇವೆ. ಮನೆಗೆ ದ್ರೋಹ ಬಗೆಯುವ ಮುಸ್ಲಿಮರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಚುನಾವಣೆ ವೇಳೆ ಯಾವ ಸಾಹುಕಾರ ಹಾಗೂ ಗೌಡನ ಮಾತುಗಳನ್ನು ಕೇಳಬೇಡಿ. ನಮ್ಮ ಪಾರ್ಟಿಯಲ್ಲಿನ ಕೆಲ ಹುಳುಕಿನಿಂದ ಈ ಬಾರಿ ಅಧಿಕಾರ ಕಳೆದುಕೊಂಡಿದ್ದೇವೆ. ಮುಂದಿನ ದಿನದಲ್ಲಿ ನಾವು ಅಧಿಕಾರಕ್ಕೆ ಬಂದು ಧರ್ಮದ್ರೋಹಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ನಾನು ಸಿಎಂ ಆದರೆ ಒಂದೆ ಒಂದು ರೂ. ಲಂಚ ಪಡೆಯದೆ ಎಲ್ಲ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡುತ್ತೇನೆ. ದೇಶದ ಭದ್ರತೆಗಾಗಿ ಪೊಲೀಸ್ ಇಲಾಖೆಯನ್ನು ಭದ್ರಗೊಳಿಸಲು ಒತ್ತು ನೀಡಬೇಕು ಎಂದರು.
ಹಿಂದುಗಳು ಇದೇ ರೀತಿ ನಿರ್ಲಿಪ್ತವಾಗಿದ್ದರೆ ಮುಂದಿನ ದಿನದಲ್ಲಿ ಜೀವನ ನಡೆಸುವುದು ಕಠಿಣವಾಗುತ್ತದೆ ಎಂದು ಹದು ಜನಾಂಗವನ್ನು ಜಾಗೃತಗೊಳಿಸಿದರು. ಅಪ್ಪ-ಮಕ್ಕಳು ದುಡ್ಡು ನೀಡಿ ಮುಖ್ಯಮಂತ್ರಿಯಾಗಲು ಹವಣಿಸಿದರೆ ಜನಬಲದಿಂದ ನಾನು ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ತಮ್ಮ ಮುಖ್ಯಮಂತ್ರಿ ಹುದ್ದೆಯ ಕನಸನ್ನು ಬಿಚ್ಚಿಟ್ಟರು.
ದೇಶಕ್ಕೆ ಗಾಂಧಿ ಒಬ್ಬರಿಂದಲೇ ಸ್ವಾತಂತ್ರ್ಯ ಸಿಕ್ಕಿಲ್ಲ, ನೇತಾಜಿ, ಸುಭಾಷ್ ಚಂದ್ರ ಬೋಸ್ ಅವರ ಭಯದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಕಿದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದ ಅವರು ಪಾಕಿಸ್ತಾನದಲ್ಲಿ ಪ್ರವಾಹ ಉಂಟಾದರೆ ಸಿನಿಮಾ ನಟರು 10 ಕೋಟಿ ರೂ. ಪರಿಹಾರ ನಿಧಿ ಕೊಡುತ್ತಾರೆ. ಅಮೀರ್ ಖಾನ್ ನಮ್ಮ ದೇಶದಲ್ಲಿ ಅತಂತ್ರ ಭಯ ಕಾಡುತ್ತಿದೆ ಎಂಬ ಹೇಳಿಕೆ ನೀಡುತ್ತಾರೆ. ಯುವಕರು ಅವರನ್ನು ರೋಲ್ ಮಾಡೆಲ್ ಮಾಡಿಕೊಳ್ಳದೆ ನಮ್ಮ ಸೈನಿಕರು, ಪೊಲೀಸರು, ಕಾರ್ಮಿಕರನ್ನು ರೋಲ್ ಮಾಡೆಲ್ ಆಗಿ ಮಾಡಿಕೊಳ್ಳಬೇಕು ಎಂದರು.
ರಾಜಾ ಸಿಂಗ್ ಅವರನ್ನು ನಿಷೇಧಿಸಿದ್ದಕ್ಕೆ ನನಗೆ ಬಹಳ ನೋವಾಗಿದೆ. ಓವೈಸಿಯನ್ನು ಬಿಟ್ಟು ರಾಜಾಸಿಂಗ್ ರನ್ನು ನಿಷೇಧಿಸುತ್ತೀರಿ, ಮುಂದಿನ ದಿನದಲ್ಲಿ ನಾವು ಅಧಿಕಾರಕ್ಕೆ ಬಂದಾಗ ನಿಮ್ಮ ಹುದ್ದೆಗೆ ಕುತ್ತು ತರುತ್ತೇವೆ ಎಂದರು.
ಈ ವೇದಿಕೆಯಲ್ಲಿ ನನಗೆ ಭಾಷಣ ಇದೇ ರೀತಿ ಮಾಡಿ ಎಂದು ಸಲಹೆ ನೀಡುತ್ತೀರಿ. ನಾನು ಜನಪ್ರತಿನಿಧಿಯಾಗಿದ್ದೇನೆ, ನನಗೆ ಹೇಳುವ ಅಧಿಕಾರ ನಿಮಗಿಲ್ಲ. ಕೇವಲ ರಕ್ಷಣೆ ನೀಡುವ ಕೆಲಸ ಮಾಡಿ ಎಂದು ಪೊಲೀಸರ ನಡೆಗೆ ಬೇಸರ ವ್ಯಕ್ತಪಡಿಸಿದರು.
ಮೋದಿ ಆಡಳಿತದಲ್ಲಿ ಸೈನಿಕರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ ಪರಿಣಾಮ ದೇಶದ ಭದ್ರತೆ ಹೆಚ್ಚಾಗಿದೆ. ಮುಂದಿನ ದಿನದಲ್ಲಿ ಮುಖ್ಯಮಂತ್ರಿಯಾಗುವ ವ್ಯಕ್ತಿಯೊಬ್ಬನ ಬಗ್ಗೆ ಸಿಬಿಐ ಹಾಗೂ ಲೋಕಾಯುಕ್ತದಲ್ಲಿ ಕೇಸ್ ಹಾಕಿದ್ದೇನೆ. ಅದನ್ನು ಎದುರಿಸಲು ಸುಪ್ರೀಂ ಕೋರ್ಟ್ ನಲ್ಲಿ 17 ವಕೀಲರನ್ನು ಬುಕ್ ಮಾಡಿಕೊಂಡಿದ್ದಾರೆ ಎಂದು ಕುಟುಕಿದರು.
ಗಮನಸೆಳೆದ ಮೆರವಣಿಗೆ :
ಗಣೇಶೋತ್ಸವ ಮೆರಚಣಿಗೆಯುದ್ದಕ್ಕೂ ಬೊಂಬೆ ಕುಣಿತ, ಪುಣ್ಯಕೋಟಿ, ಆಂಜನೇಯ, ಶ್ರೀಕೃಷ್ಣ, ಛತ್ರಪತಿ ಶಿವಾಜಿ ಮಹಾರಾಜ, ಸ್ಥಬ್ದ ಚಿತ್ರ ಮೆರವಣಿಗೆ, ಮಹಾರಾಷ್ಟ್ರದ ಸ್ವರನಾದ ಸಂಭಾಳ, ಹಲಗೆ ವಾದನ ನೋಡುಗರ ಕಣ್ಮನ ಸೆಳೆಯಿತು. ಡಿಜೆ ಹಾಡಿಗೆ ಯುವಸಮೂಹ ಭರ್ಜರಿ ಹೆಜ್ಜೆ ಹಾಕಿದರು.
ಬಿಗಿ ಬಂದೋಬಸ್ತ್: ನಗರದ ಜನತಾ ರಾಜಾ ಎಂದೇ ಖ್ಯಾತಿ ಹೊಂದಿರುವ ಗಣೇಶ ಮೂರ್ತಿ ವಿಸರ್ಜನೆಗೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಡಿವೈಎಸ್ಪಿ ಶಾಂತವೀರ ಈ, ಸಿಪಿಐ ಹಾಗೂ ಪಿಎಸ್ಐ ಅಜಿತ ಕುಮಾರ ಹೊಸಮನಿ ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.