Advertisement

Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ

12:05 PM Nov 03, 2024 | sudhir |

ವಿಜಯಪುರ: ಕಾನೂನು ಬಾಹಿರವಾಗಿ ರೈತರ, ಸಂಘ-ಸಂಸ್ಥೆಗಳ, ಮಠ ಮಾನ್ಯಗಳ ಜಮೀನು, ಅಲ್ಲದೇ ಸರ್ಕಾರಿ ಜಮೀನು, ಇತ್ಯಾದಿ ಆಸ್ತಿಗಳ ಉತಾರೆಯಲ್ಲಿ ವಕ್ಪ್ ಆಸ್ತಿ ಎಂದು ಎಂಟ್ರಿ ಮಾಡಿರುವುದನ್ನು ತಕ್ಷಣ ತೆಗೆದು ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ನವೆಂಬರ್ 4ರ ಸೋಮವಾರದಿಂದ ಬೆಳಗ್ಗೆ 11 ಗಂಟೆಗೆ ಶ್ರೀ ಸಿದ್ದೇಶ್ವರ ಗುಡಿಯಿಂದ ಮೆರವಣಿಗೆ ಮೂಲಕ ತೆರಳಿ ನಗರದ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ನೋಟಿಸ್ ಕೊಟ್ಟು ಅಥವಾ ಕೊಡದೆ ಉತಾರೆಗಳಲ್ಲಿ ವಕ್ಪ್ ಆಸ್ತಿ ಎಂದು ಎಂಟ್ರಿ ಮಾಡಿರುವುದನ್ನು ತೆಗೆದು ಹಾಕಬೇಕು. ಉತಾರೆಯ ಯಾವುದೇ ಕಾಲಂ‌ ದಲ್ಲಿಯೂ ವಕ್ಪ್ ಅಂತ ಇರಬಾರದು, ಕೇವಲ ರೈತರ ಹೆಸರು ಮಾತ್ರ ಇರಬೇಕು. ಯಾವುದೇ ಆಸ್ತಿಗಳಿಗೆ ಸಂಬಂಧಿಸಿದ ತಕರಾರು ಸಾಮಾನ್ಯ ಕೋರ್ಟ್ ಗಳಲ್ಲೇ ಇತ್ಯರ್ಥ ಆಗಬೇಕು, ವಕ್ಪ್ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಬಾರದು ಎಂದು ಹೇಳಿದ್ದಾರೆ.

ವಕ್ಪ್ ಅದಾಲತ್ ಮಾಡುವುದರಿಂದ ಸರ್ಕಾರಿ ನ್ಯಾಯಾಲಯಕ್ಕೆ ಮಹತ್ವ ಕಡಿಮೆ ಆಗಲಿದ್ದು, ಹೀಗಾಗಿ ಎಲ್ಲಿಯೂ ವಕ್ಪ್ ಅದಾಲತ್ ನಡೆಸಬಾರದು.
ಈಗಾಗಲೇ ವಕ್ಪ್ ಅಂತ ಎಂಟ್ರಿ ಮಾಡಿದನ್ನು ತೆಗೆದು ಹಾಕುವಂತೆ ಹಾಗೂ ನೋಟಿಸ್ ಗಳನ್ನು ಹಿಂಪಡೆಯುವುದು ಮತ್ತು ಮುಂದೆಯೂ ನೋಟಿಸ್ ಗಳನ್ನು ನೀಡದಂತೆ ಜಿಲ್ಲಾಧಿಕಾರಿಗಳು ಲಿಖಿತವಾಗಿ ಆದೇಶ ಹೊರಡಿಸಬೇಕು ಎಂದಿ ದ್ದಾರೆ.

ವಕ್ಪ್ ಕಾಯ್ದೆಯನ್ನೇ ರದ್ದುಪಡಿಸಬೇಕು ಹಾಗೂ ಇಡೀ ದೇಶದ ಎಲ್ಲ ರಾಜ್ಯಗಳಲ್ಲಿಯ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ ದೇಶದ ಆಸ್ತಿಯೆಂದು ಸರ್ಕಾರದ ಸುಪರ್ದಿಗೆ ಪಡೆಯುವುದು. 1974 ರ ಮತ್ತು ತದನಂತರದ ವಕ್ಫ್ ಗೆಜೆಟ್ ನೋಟಿಫಿಕೇಶನ್ ಗಳನ್ನು ಹಿಂಪಡೆಯಬೇಕು. ಇಲ್ಲಿಯವರೆಗಿನ ವಕ್ಫ್ ಗಳಿಸಿದ ಆದಾಯಗಳನ್ನು ಸರ್ಕಾರಕ್ಕೆ ಸಲ್ಲಿಸುವದು, ಸುಖಾ ಸುಮ್ಮನೆ ರೈತರಿಗೆ ನೋಟಿಸ್ ನೀಡಿದ ಮತ್ತು ಯಾರದೋ ಆಸ್ತಿಗಳನ್ನು ವಕ್ಫ ಆಸ್ತಿ ಎಂದು ಎಂಟ್ರೀ ಮಾಡಿದ ಅಧಿಕಾರಿ ಹಾಗು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಹೀಗೆ ಹಲವು ಬೇಡಿಕೆಗಳೊಂದಿಗೆ ಧರಣಿ ಹಮ್ಮಿಕೊಳ್ಳಲಾಗಿದೆ. ಈ ಧರಣಿಯಲ್ಲಿ ರಾಜ್ಯ ಹಾಗು ಕೇಂದ್ರದ ನಾಯಕರುಗಳು, ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ, ಪಕ್ಷಾತೀತವಾಗಿ, ರೈತರು, ನಾಗರಿಕರು, ನ್ಯಾಯವಾದಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಮಠಾಧೀಶರು, ಹಿಂದೂ ದೇಶಾಭಿಮಾನಿಗಳು, ವ್ಯಾಪಾರಸ್ಥರು, ಕಾರ್ಯಕರ್ತರು, ಮುಖಂಡರುಗಳು, ಮಹಿಳೆಯರು ಜಿಲ್ಲೆಯ ಎಲ್ಲ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನಿರ್ದಿಷ್ಟ ಅವಧಿಯ ಈ ಧರಣಿ ಸತ್ಯಾಗ್ರಹದ ಹೋರಾಟ ಯಶಸ್ವಿಗೊಳಿಸಲು ಅವರು ವಿನಂತಿಸಿದ್ದಾರೆ.

Advertisement

ಇದನ್ನೂ ಓದಿ: Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

Advertisement

Udayavani is now on Telegram. Click here to join our channel and stay updated with the latest news.

Next