Advertisement
ಬುಧವಾರವಷ್ಟೆ ಆಪರೇಶನ್ ಬ್ಲೂಸ್ಟಾರ್‌ನ ವರ್ಷಾಚರಣೆ ನೆನಪಲ್ಲಿ ಕೆನಡಾದ ಬ್ರಾಂಪ್ಟನ್‌ನಲ್ಲಿ ಖಲಿಸ್ಥಾನಿ ಉಗ್ರರು ಇಂದಿರಾ ಹತ್ಯೆ ಕುರಿತ ಸ್ತಬ್ಧಚಿತ್ರ ಮಾದರಿಯನ್ನು 5 ಕಿ.ಮೀ.ಗಳ ವರೆಗೆ ಮೆರವಣಿಗೆ ಮಾಡಿದ್ದರು. ಈ ಬಗ್ಗೆ ಭಾರತದಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು. ಇದಕ್ಕೆ ಗುರುವಾರ ಸಚಿವ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದು, ಇದು ಕೆನಡಾದ ಓಟ್‌ಬ್ಯಾಂಕ್ ರಾಜಕಾರಣ ಎಂದು ಕರೆದಿದ್ದಾರೆ. ಅಲ್ಲಿನ ಸರಕಾರ ಪ್ರತ್ಯೇಕತಾವಾದಿಗಳಿಗೆ ಆಸರೆ ನೀಡುತ್ತಿದೆ. ಇಂದಿರಾ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸುವ ವೀಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಪ್ರಕರಣದ ಹಿಂದೆ ಬೇರೇನೋ ವಿಚಾರದ ನೆರಳು ಕಾಣುತ್ತಿದೆ ಎಂದು ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಉದ್ವಿಗ್ನತೆ ಶಮನವಾಗದೇ ಮತ್ತು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರ ನಿಯೋಜನೆ ನಿಲ್ಲುವವರೆಗೂ ಭಾರತ-ಚೀನ ನಡುವಿನ ಸಂಬಂಧಗಳು ಸಹಜತೆಗೆ ಮರಳಬೇಕು ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು. “2020ರಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತದ ಗಡಿಯಲ್ಲಿ ಸೈನಿಕರನ್ನು ನಿಯೋಜಿಸುವ ಮೂಲಕ ಚೀನ ಗಡಿ ನಿರ್ವಹಣೆ ಒಪ್ಪಂದಗಳನ್ನು ಉಲ್ಲಂ ಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತ-ಚೀನ ನಡುವಿನ ಸಂಬಂಧ ಸುಧಾರಣೆಯಾಗಿಲ್ಲ’ ಎಂದರು. ಇದೇ ವೇಳೆ, “ಅಖಂಡ ಭಾರತ ಪರಿಕಲ್ಪನೆಯ ಬಗ್ಗೆ ಪಾಕಿಸ್ಥಾನಕ್ಕೆ ಅರ್ಥವಾಗುವುದಿಲ್ಲ. ಅದಕ್ಕೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ. ಅವಿಭಜಿತ ಭಾರತವು ಅಶೋಕ ಸಾಮ್ರಾಜ್ಯದ ವಿಸ್ತಾರವನ್ನು ತೋರಿಸುತ್ತದೆ. ಜತೆಗೆ ಜವಾಬ್ದಾರಿಯುತ ಮತ್ತು ಜನ ಆಧಾರಿತ ಆಡಳಿತದ ಪರಿಕಲ್ಪನೆಗೆ ಸಾಕ್ಷಿಯಾಗಿದೆ’ ಎಂದು ಜೈಶಂಕರ್ ಹೇಳಿದರು.