Advertisement

ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆ

08:40 AM Jul 26, 2017 | Karthik A |

ಮೊರಾರ್ಜಿ ಶಾಲೆ ರಜತ ವರ್ಷಕ್ಕೆ ಚಾಲನೆ

Advertisement

ಬೆಳ್ತಂಗಡಿ: ತಾಲೂಕಿನಲ್ಲಿ ನಾಲ್ಕು ವಸತಿ ಶಾಲೆಗಳು ಇದ್ದು ಸರಕಾರ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆದುಕೊಳ್ಳಬೇಕು ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಮಂಗಳವಾರ ಮುಂಡಾಜೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಜತ ವರ್ಷಕ್ಕೆ ಚಾಲನೆ ಹಾಗೂ ರಾಜ್ಯದಲ್ಲಿ ಬೆರಳಣಿಕೆಯಲ್ಲಿ ಮಂಜೂರಾದ ಇಂದಿರಾ ಗಾಂಧಿ ವಸತಿ ಶಾಲೆಗಳ ಪೈಕಿ ಬೆಳ್ತಂಗಡಿ ತಾಲೂಕಿನ ಹೊಸಂಗಡಿಗೆ ಮಂಜೂರಾದ ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟಿಸಿ ಮಾತನಾಡಿದರು.

ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ. ಸದಸ್ಯರಾದ ನಮಿತಾ, ಕೊರಗಪ್ಪ ನಾಯ್ಕ, ಧರಣೇಂದ್ರ ಕುಮಾರ್‌ ಪಿ., ತಾ.ಪಂ. ಸದಸ್ಯ ಓಬಯ್ಯ, ಪೋಷಕ ಮಾಯಿಲಪ್ಪ, ಹೊಸಂಗಡಿ ಗ್ರಾ.ಪಂ. ಸದಸ್ಯರಾದ ಹರಿಪ್ರಸಾದ್‌, ಅಕ್ಬರಾಲಿ, ಶ್ರೀಪತಿ ಉಪಾಧ್ಯಾಯ, ರೋಶನ್‌ ಎಡ್ವಿನ್‌ ಮೊರಾಸ್‌, ಮುಂಡಾಜೆ ಶಾಲಾ ಪ್ರಾಂಶುಪಾಲ ಮುರಳೀಧರ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸುಜಿತ್‌ ಎಂ.ಬಿ. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಅರವಿಂದ ಚೊಕ್ಕಾಡಿ ಪ್ರಸ್ತಾವನೆಗೈದು, ಮುಂಡಾಜೆ ಶಾಲೆಯ ಬೆಳ್ಳಿಹಬ್ಬದ ಸ್ಥೂಲ ನೋಟ ನೀಡಿದರು.

ಹೊಸಂಗಡಿಯಲ್ಲಿ ಕಟ್ಟಡವಾದ ಬಳಿಕ ಅಲ್ಲಿಗೆ ಸ್ಥಳಾಂತರವಾಗಲಿರುವ ನೂತನ ಶಾಲೆಯಲ್ಲಿ 250 ಮಕ್ಕಳಿಗೆ ಪ್ರವೇಶಾವಕಾಶ ಇದ್ದು ಶೇ. 70 ಹಿಂದುಳಿದ ವರ್ಗ ಹಾಗೂ ಉಳಿಕೆ  ಶೇ. 30 ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶವಿದೆ ಎಂದರು. ರಜತವರ್ಷದ ಲಾಂಛನವನ್ನು ಶಾಸಕರು ಅನಾವರಣ ಮಾಡಿದರು. ಉಷಾ ಸ್ವಾಗತಿಸಿ, ಜಯಪ್ರಕಾಶ್‌ ವಂದಿಸಿದರು. ಶಿಕ್ಷಕಿ ವಾಣಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next