Advertisement

ಸಂಗೀತಗಾರ ಟಿಎಂ ಕೃಷ್ಣಗೆ ಇಂದಿರಾ ಗಾಂಧಿ ಪ್ರಶಸ್ತಿ

11:25 AM Oct 15, 2017 | Harsha Rao |

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷದಿಂದ ಪುರಸ್ಕರಿಸಲಾಗುವ ಇಂದಿರಾ ಗಾಂಧಿ ರಾಷ್ಟ್ರೀಯ ಸಮನ್ವಯ ಪ್ರಶಸ್ತಿಗೆ ಈ ಬಾರಿ ಸಂಗೀತಗಾರ ಟಿ ಎಂ ಕೃಷ್ಣ ಆಯ್ಕೆಯಾಗಿದ್ದಾರೆ. ಅ.31ರಂದು ಈ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. 1985ರಲ್ಲಿ ಕಾಂಗ್ರೆಸ್‌ ಶತಮಾನೋತ್ಸವದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಘೋಷಿಸಲಾಗಿತ್ತು. ಇದು 10 ಲಕ್ಷ ರೂ. ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿರಲಿದೆ.

Advertisement

ಸಂವೇದನಾಶೀಲ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ ಎಂ ಕೃಷ್ಣ ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಾರೆ. ಅವರು ಆಂಗ್ಲ ದೈನಿಕದ ಅಂಕಣದಲ್ಲಿ ಸಾಮಾಜಿಕ ಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ. ಯುದ್ಧಪೀಡಿತ ಉತ್ತರ ಶ್ರೀಲಂಕಾ ಭಾಗದಲ್ಲಿ ತಮಿಳು ಸಂಗೀತ ಸಂಸ್ಕೃತಿಗೆ ಮರುಜೀವ ನೀಡುವ ಚಳವಳಿಯಲ್ಲಿ ಇವರು ಭಾಗವಹಿಸಿದ್ದರು. 2015- 2016ರ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದ್ದು, ಈ ಹಿಂದೆ ಧಾರ್ಮಿಕ ಮುಖಂಡ ಸ್ವಾಮಿ ರಂಗನಾಥಾನಂದ, ಸ್ವಾತಂತ್ರ್ಯ ಹೋರಾಟಗಾರ ಅರುಣಾ ಅಸಫ್ ಅಲಿ, ಗಾಯಕಿ ಎಂ. ಎಸ್‌. ಸುಬ್ಬುಲಕ್ಷ್ಮಿ ಸೇರಿ ಹಲವರಿಗೆ ಈ ಪ್ರಶಸ್ತಿ ಸಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next