Advertisement
ಇಂದಿರಾ ಕ್ಯಾಂಟೀನ್ ಜನಪ್ರಿಯತೆ ಪಡೆದ ಬೆನ್ನಲ್ಲೇ ಮುಂದುವರೆದ ಭಾಗವಾಗಿ ಹಿಂದಿನಸರ್ಕಾರ ಇಂದಿರಾ ಕ್ಲಿನಿಕ್‌ಗಳನ್ನು ನಗರದಎರಡು ಕಡೆ ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಅವು ಪ್ರಯೋಗದ ಹಂತದಲ್ಲಿಯೇ ಅನಾರೋಗ್ಯಗೊಂಡಂತಾಗಿವೆ.
Related Articles
Advertisement
ಇಂದಿರಾ ಕ್ಲಿನಿಕ್ ಆರಂಭವಾದ ನಂತರ ಬಿಎಂಟಿಸಿ ಸಿಬ್ಬಂದಿ ಮಾತ್ರವಲ್ಲದೇ ಜನ ಸಾಮಾನ್ಯರಿಗೂ ತುಂಬಾ ಅನುಕೂಲವಾಗುತ್ತಿತ್ತು. ತುರ್ತು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಈಗ ಸರಿಯಾದ ಸಮಯಕ್ಕೆ ಬಾಗಿಲು ತೆರೆದಿರುವುದಿಲ್ಲ. ವಾರದಲ್ಲಿ ಎರಡರಿಂದ ಮೂರು ದಿನ ಕ್ಲಿನಿಕ್ ಬಾಗಿಲು ತೆರದಿರಬಹುದು ಎಂದು ಬಿಎಂಟಿಸಿ ಬಸ್ ನಿರ್ವಾಹಕರೊಬ್ಬರು ತಿಳಿಸುತ್ತಾರೆ.
ಇಂದಿರಾ ಕ್ಲಿನಿಕ್‌ಗಳಲ್ಲಿ ದೂರದ ಊರುಗಳಿಂದ ಬಂದಿಳಿದ ಪ್ರಯಾಣಿಕರ ಆರೋಗ್ಯದಲ್ಲಿ ತೊಂದರೆಯಾಗಿದ್ದಲ್ಲಿ ತಕ್ಷಣ ಚಿಕಿತ್ಸೆ ನೀಡುತ್ತಿದ್ದರು. ಜತೆಗೆ ಬಸ್ ಚಾಲಕ ಅಥವಾ ನಿರ್ವಾಹಕರು ಕೆಲಸ ನಿರ್ವಹಿಸುವಂತಹ ಸಂದರ್ಭ, ಆರೋಗ್ಯದಲ್ಲಿ ವ್ಯತ್ಯಾಸವಾದರೂ ಚಿಕಿತ್ಸೆಗಾಗಿ ಧಾವಿಸುತ್ತಿದ್ದರು. ಆದರೆ ಈಗ ಯಾವುದೇ ಚಿಕಿತ್ಸೆಯಿಲ್ಲದೇ, ಕ್ಲಿನಿಕ್ ದುಸ್ಥಿತಿಯಲ್ಲಿದೆ ಎಂದು ಬಸ್ ಚಾಲಕರೊಬ್ಬರು ಹೇಳುತ್ತಾರೆ. ಇಂದಿರಾ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ ಅಧಿಕಾರಿ, ಒಬ್ಬ ನರ್ಸ್ ಹಾಗೂ ಒಬ್ಬ ಔಷಧಿ ನೀಡುವವರು ಸೇರಿದಂತೆ ಮೂವರನ್ನು ನಿಯೋಜಿಸಲಾಗಿದೆ.
ಅವಶ್ಯಕ ಪ್ರಾಥಮಿಕ ಆರೋಗ್ಯ ಸೇವೆಗಳಾದ ಅಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ಸೌಲಭ್ಯ, ತುರ್ತು ನಿಗಾ ಘಟಕದ ಸೇವೆ, ಪ್ರಾಥಮಿಕ ಪ್ರಯೋಗಾಶಾಲಾ ಸೌಲಭ್ಯ, ಅವಶ್ಯಕಜನರಿಕ್ ಔಷಧಿಗಳ ಲಭ್ಯತೆಯೂ ಇದೆ. ಆದರೆ,ಯಾಕೆ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರಬಗ್ಗೆ ಪರಿಶೀಲಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
ಕ್ರಮದ ಭರವಸೆ : ನಗರದಲ್ಲಿ ಈಗಲೂ ಎರಡು ಇಂದಿರಾ ಕ್ಲಿನಿಕ್‌ಗಳು ಚಾಲ್ತಿಯಲ್ಲಿವೆ. ಒಂದು ಮೆಜೆಸ್ಟಿಕ್ ಹಾಗೂ ಯಶವಂತಪುರ ಬಸ್ ನಿಲ್ದಾಣದಲ್ಲಿವೆ. ಒಂದು ವೇಳೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುವುದು ನಮ್ಮ ಗಮನಕ್ಕೆ ಬಂದರೆ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ. ಬಾಲಸುಂದರ್ ತಿಳಿಸುತ್ತಾರೆ.
– ಭಾರತಿ ಸಜ್ಜನ್