Advertisement

ಕಂಪೌಂಡ್‌ ಕುಸಿದು ಇಂದಿರಾ ಕ್ಯಾಂಟೀನ್‌ ಒಳಗೆ ನುಗ್ಗಿದ ಕೆಸರು ನೀರು

03:42 PM Jul 19, 2019 | keerthan |

ಬಂಟ್ವಾಳ: ಭಾರಿ ಮಳೆಗೆ ಬಂಟ್ವಾಳ ಬಿ.ಸಿ.ರೋಡ್‌ ನ ಇಂದಿರಾ ಕ್ಯಾಂಟೀನ್‌ ಕಟ್ಟಡದ ತಡೆಗೋಡೆ ಕುಸಿದಿದ್ದು, ಸುತ್ತಲಿನ ಕೆಸರು ನೀರು ಕ್ಯಾಂಟೀನ್‌ ಒಳಗೆ ನುಗ್ಗಿದ ಘಟನೆ ಶುಕ್ರವಾರ ನಡೆದಿದೆ.

Advertisement

ಕಂಪೌಂಡ್‌ ಗೋಡೆಯ ಹಿಂಬದಿಯಲ್ಲಿ ಮಳೆ ನೀರು ನಿಂತಿದ್ದು ಅದರ ಒತ್ತಡಕ್ಕೆ ಕೆಂಪುಕಲ್ಲು ಗೋಡೆ ಸುಮಾರು 5 ಮೀಟರ್‌ ಉದ್ದಕ್ಕೆ ಸಂಪೂರ್ಣ ಅಡ್ಡ ಬಿದ್ದಿದೆ. ಇದರಿಂದ ಎರಡು ಗಂಟೆಗಳಷ್ಟು ಸಮಯ ಕ್ಯಾಂಟೀನ್‌ ಆವರಣದಲ್ಲಿ ಮಳೆ ನೀರು ಒಂದು ಅಡಿಗಳಷ್ಟು ಎತ್ತರಕ್ಕೆ ತುಂಬಿದ್ದು ಬಳಿಕ ಅದನ್ನು ಬಸಿದು ಹೋಗುವಂತೆ ಮಾಡಲಾಗಿತ್ತು.

ಕಳೆದೆರಡು ದಿನಗಳಿಂದ ಈ ಭಾಗದಲ್ಲಿ  ಮಳೆಯಾಗುತ್ತಿದ್ದು, ಇತ್ತೀಚೆಗಷೇ ಕಟ್ಟಲಾಗಿದ್ದ ಕ್ಯಾಂಟೀನ್‌ ತಡೆಗೋಡೆ ಕುಸಿದು ಬಿದ್ದಿದೆ. ಕಳೆದ ವರ್ಷದ ಡಿಸೆಂಬರ್‌ ನಲ್ಲಷ್ಟೇ ಬಿ.ಸಿ.ರೋಡು ಇಂದಿರಾ ಕ್ಯಾಂಟೀನ್‌ ಉದ್ಘಾಟನೆಯಾಗಿದ್ದು, ವರ್ಷದ ಮೊದಲೇ ತಡೆಗೋಡೆ ಕುಸಿದಿದೆ.

ತಡೆಗೋಡೆ ಕುಸಿದ ಕಾರಣದಿಂದ ಸುತ್ತಲಿನ ಕೆಸರು ನೀರು ಕ್ಯಾಂಟೀನ್‌ ಒಳಗೆ ನುಗ್ಗಿದೆ. ಕಳಪೆ ಕಾಮಗಾರಿಯ ವಿರುದ್ಧ ಜನರು ಅಸಹನೆ ವ್ಯಕ್ತ ಪಡಿಸಿದ್ದಾರೆ.


ಮಾಹಿತಿ ತಿಳಿದು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮತ್ತು ಸಿಬಂದಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರು. ತಡೆಗೋಡೆ ಪುನರ್‌ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಡೆಗೋಡೆ ಕುಸಿತದಿಂದ ಹತ್ತಿರದ ಕಟ್ಟಡ ತಳಪಾಯವು ಕಾಣುತ್ತಿದ್ದು ಮಳೆಯ ನೀರು ರಭಸದಿಂದ ಗೋಡೆಗೆ ಹೊಡೆದಲ್ಲಿ ಅಪಾಯ ಕಟ್ಟಿಟ್ಟದ್ದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next