Advertisement

ಇಂದಿರಾ ಕ್ಯಾಂಟೀನ್‌ ಕಾಮಗಾರಿ ಅಂತಿಮ ಹಂತಕ್ಕೆ

11:02 AM Jul 22, 2019 | sudhir |

ಸುಳ್ಯ: ಹಲವು ತಿಂಗಳಿನಿಂದ ಉದ್ಘಾಟನೆಗೆ ಕಾಯುತ್ತಿರುವ ಇಂದಿರಾ ಕ್ಯಾಂಟೀನ್‌ ಶೀಘ್ರ ಕಾರ್ಯಾರಂಭಕ್ಕೆ ಸಂಬಂಧಿಸಿ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆ ಸಂಸ್ಥೆ ಕ್ಯಾಂಟೀನ್‌ ಆರಂಭಿಸಲು ತೆಗೆದುಕೊಂಡಿರುವ ಕಾಲಾ ವಕಾಶದಲ್ಲಿ ಇನ್ನು ಒಂದು ವಾರ ಮಾತ್ರ ಉಳಿದಿದೆ..!

Advertisement

ದ.ಕ.ಜಿಲ್ಲೆ ಸಹಿತ ರಾಜ್ಯದ ವಿವಿಧ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಗೊಂಡು ಕಡಿಮೆ ದರದಲ್ಲಿ ಊಟ- ಉಪಾಹಾರ ವಿತರಣೆ ಆರಂಭ ಗೊಂಡಿತ್ತು. ಸುಳ್ಯದಲ್ಲಿ ಕಟ್ಟಡ ಸಿದ್ಧವಿದ್ದರೂ ಪ್ರಾರಂಭಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಹೀಗಾಗಿ 15 ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ತಾಲೂಕು ಆಡಳಿತ ಸಂಬಂಧಿಸಿದ ಗುತ್ತಿಗೆ ಸಂಸ್ಥೆಗೆ ಸೂಚಿಸಿತ್ತು.

ಆವರಣ ಗೋಡೆ ನಿರ್ಮಾಣ ಪ್ರಗತಿ

ಕ್ಯಾಂಟೀನ್‌ ಸುತ್ತ ಆವರಣ ಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದು, ಅದು ಅಂತಿಮ ಹಂತಕ್ಕೆ ತಲುಪಿದೆ. ಮುಂದಿನ 1 ವಾರದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಲೂಕು ಆಡಳಿತ ಸೂಚನೆ ನೀಡಿರುವುದರಿಂದ ಕಾಮಗಾರಿಗೆ ವೇಗ ನೀಡಲಾಗಿದೆ.

ಒಂದು ವಾರ ಬಾಕಿ

Advertisement

ಇಂದಿರಾ ಕ್ಯಾಂಟೀನ್‌ ಅನ್ನು ಕಾರ್ಯಾರಂಭಿಸುವ ಕುರಿತಂತೆ ಸಂಬಂಧಿಸಿದ ಸಂಸ್ಥೆಗೆ ಸೂಚನೆ ನೀಡಲಾಗಿತ್ತು. ಈ ವೇಳೆ ಅಂತಿಮ ಹಂತದ ಕೆಲಸ ಪೂರ್ಣಗೊಳಿಸಲು 15 ದಿನ ಕಾಲಾವಕಾಶ ಕೇಳಿದ್ದರು. ಇದರಲ್ಲಿ ಇನ್ನು ಒಂದು ವಾರ ಬಾಕಿ ಇದೆ. ಆವರಣ ಗೋಡೆ ಕಾಮಗಾರಿ ಪೂರ್ಣಗೊಳಿಸಿದ ತತ್‌ಕ್ಷಣ ಕ್ಯಾಂಟೀನ್‌ ಕಾರ್ಯಾರಂಭಿಸುವುದಾಗಿ ಗುತ್ತಿಗೆ ಸಂಸ್ಥೆ ತಿಳಿಸಿದೆ..

– ಕುಂಞಿ ಅಹ್ಮದ್‌ ತಹಶೀಲ್ದಾರ್‌, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next