Advertisement

ಇಂದಿರಾ ಕ್ಯಾಂಟೀನ್‌ ಕಾಮಗಾರಿ ಶೀಘ್ರ ಪೂರ್ಣ

01:13 PM Feb 04, 2018 | |

ಸುರತ್ಕಲ್‌ : ಸುರತ್ಕಲ್‌ ಬಳಿ ಇದೀಗ ನೂತನ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ.

Advertisement

ಸುರತ್ಕಲ್‌ ಪ್ರಾಥಮಿಕ ಆರೋಗ್ಯ ಆಸ್ಪತ್ರೆಯ ಆವರಣದೊಳಗೆ ಕಟ್ಟಡವನ್ನು ಜೋಡಿಸಲಾಗುತ್ತಿದೆ. ಎರಡು ಶೌಚಾಲಯ, ಒಂದು ನೀರಿನ ಟ್ಯಾಂಕ್‌ ಹೊರಗೆ ಹಾಗೂ ಒಳಗೆ ಆಹಾರ ಸೇವನೆ ಮಾಡಲು ವ್ಯವಸ್ಥೆಯಿದ್ದು ಶೀಘ್ರ ಕ್ಯಾಂಟೀನ್‌ ಆರಂಭಗೊಳ್ಳಲಿದೆ. ಸುರತ್ಕಲ್‌ನಲ್ಲಿ ಜಾಗದ ಸಮಸ್ಯೆ ಇರುವುದರಿಂದ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ಸಿದ್ಧಗೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next