Advertisement

ಇಂಡಿಗೋ ಹೊಸ ವಿಮಾನದಲ್ಲಿ ತಾಂತ್ರಿಕ ದೋಷ; ಮರಳಿ ಫ್ರಾನ್ಸ್‌ಗೆ

03:43 PM Mar 16, 2018 | Team Udayavani |

ಹೊಸದಿಲ್ಲಿ : ಹೊಚ್ಚ ಹೊಸ ಪ್ಯಾಟ್‌ ಆ್ಯಂಡ್‌ ವಿಟ್‌ನೆ ಇಂಜಿನ್‌ ಹೊಂದಿರುವ ಇಂಡಿಗೋ ಏರ್‌ಲೈನ್ಸ್‌ನ ಎಟಿಆರ್‌ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಫ್ರಾನ್ಸ್‌ ತೌಲೋಸ್‌ನಿಂದ ಹೊರಟ ವಿಮಾನ ಟೇಕಾಫ್ ಆದ ಒಂದು ತಾಸಿನ ಒಳಗೆ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ನಡೆದಿದೆ. 

Advertisement

ಇಂಜಿನ್‌ನಲ್ಲಿ ತೈಲ ಒತ್ತಡ ಅತೀ ಕಡಿಮೆ ಇದ್ದುದರ ಪರಿಣಾಮವಾಗಿ ಉಂಟಾದ ತಾಂತ್ರಿಕ ದೋಷ ಕಂಡು ಬಂತೆಂದು ಇಂಡಿಗೋ ಮೂಲ ತಿಳಿಸಿದೆ.

ವಿಶೇಷವೆಂದರೆ ಹೊಚ್ಚ ಹೊಸ ಇಂಜಿನ್‌ ಅಳವಡಿಸಲ್ಪಟ್ಟ ಇಂಡಿಗೋ ವಿಮಾನದ ಈ ಹಾರಾಟವು ತೌಲೋಸ್‌ ಮತ್ತು ಹೊಸದಿಲ್ಲಿಯ ನಡುವಿನ ಮೊತ್ತ ಮೊದಲ ಹಾರಾಟವಾಗಿತ್ತು. ತೌಲೋಸ್‌ನಿಂದ ಹೊಸದಿಲ್ಲಿಯಯಲ್ಲಿನ ಇಂಡಿಗೋ ಹಬ್‌ಗ ಬರಲಿದ್ದ ಈ ವಿಮಾನದಲ್ಲಿ ಹಣ ತೆತ್ತ ಪ್ರಯಾಣಿಕರು ಯಾರೂ ಇರಲಿಲ್ಲ. 

ಈ ವಿದ್ಯಮಾನವನ್ನು ದೃಢೀಕರಿಸಿ ತನ್ನ ಅಧಿಕೃತ ಹೇಳಿಕೆ ಹೊರಡಿಸಿರುವ ಇಂಡಿಗೋ ವಿಮಾನ ಯಾನ ಸಂಸ್ಥೆಯು, “ತಾಂತ್ರಿಕ ಕಾರಣಗಳಿಗಾಗಿ ತೌಲೋಸ್‌ಗೆ ಮರಳಿರುವ ವಿಮಾನವನ್ನು  ನಿಯಮಗಳ ಪ್ರಕಾರ ಮತ್ತೆ ಪುನಃ ಎಲ್ಲ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿ ಸುರಕ್ಷೆತೆ ಮತು ಕ್ಷಮತೆಯು ಖಚಿತವಾದ ಅನಂತರವೇ ದಿಲ್ಲಿಗೆ ಡೆಲಿವರಿ ನೀಡಲಾಗುತ್ತದೆ’ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next