Advertisement

ಇಂಡಿಗೋ ವಿಮಾನದಿಂದ ಪ್ರಯಾಣಿಕನೋರ್ವನನ್ನು ಹೊರಕ್ಕೆ ಹಾಕಿದ ಸಿಬ್ಬಂದಿಗಳು.. ಯಾಕೆ..?

07:03 PM Mar 21, 2021 | Team Udayavani |

ಕೊಲ್ಕತ್ತಾ : ಮಾಸ್ಕ್ ಧರಿಸಿಲ್ಲ ಎಂಬ ಕಾರಣದಿಂದ ಇಂಡಿಗೊ ವಿಮಾನದಿಂದ ಪ್ರಯಾಣಿಕರೊರ್ವರನ್ನು ಹೊರ ಹಾಕಿದ ಘಟನೆ ಕಲ್ಕತ್ತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Advertisement

ಕೋವಿಡ್ ರೂಪಾಂತರಿ ಅಲೆ ಮತ್ತೆ ಆತಂಕವನ್ನು ಸೃಷಟ್ಇಸುತ್ತಿರುವಾಗ ಸಾರ್ವಜನಿಕ ವಲಯದಲ್ಲಿ ಸರ್ಕಾರ ಮತ್ತೆ ಕಠಿಣ ನಿಯಮಗಳನ್ನು ಹೇರಿದೆ. ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದೆ. ಮಾಸ್ಕ್ ಧರಿಸದವರಿಗೆ ಕೆಲವೆಡೆ ದಂಡ ವಿಧಿಸಲಾಗುತ್ತಿದೆ.

ಓದಿ:  ಸಿಡಿ ಹಿಂದಿನ ಮಹಾನ್ ನಾಯಕನ ಬಗ್ಗೆ ತನಿಖೆಯಾಗಲಿ : ಎಸ್.ಆರ್. ಪಾಟೀಲ

ಬೆಂಗಳೂರು- ಕಲ್ಕತ್ತಾ ವಿಮಾನದಲ್ಲಿ ಮಾಸ್ಕ್ ಧರಿಸಿದ ಪ್ರಯಾಣಿಕನಲ್ಲಿ ಮಾಸ್ಕ್ ಹಾಕುವಂತೆ ಹಲವು ಬಾರಿ ಕೇಳಿಕೊಂಡರೂ ಕೂಡ ಮಾಸ್ಕ್ ಧರಿಸದ ಕಾರಣ ಆತನನ್ನು ಹೊರಗೆ ಕಳುಹಿಸಲಾಯಿತು.

ಇತ್ತೀಚೆಗೆ ಏರ್ ಏಷ್ಯಾ ಇಂಡಿಯಾ ಕೂಡಾ ಗೋವಾ ಮುಂಬೈ ವಿಮಾನದಲ್ಲಿ ಇದೇ ರೀತಿಯಲ್ಲಿ ಪ್ರಯಾಣಿಕನನ್ನು ಹೊರಗೆ ಕಳುಹಿಸಿರುವ ಘಟನೆಯನ್ನು ನೆನಪು ಮಾಡಿಕೊಡುತ್ತದೆ ಈ ಘಟನೆ.

Advertisement

2020 ಮಾರ್ಚ್ ತಿಂಗಳಿನಿಂದ ದೇಶದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದ ಸಾರ್ವಜನಿಕ ವಲಯಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಯಿತು.

ಓದಿ:  ‘ಜೈ ಶ್ರೀರಾಮ್’ : ಮೋದಿ, ಶಾ ಅವರ ಅಡಿಯಲ್ಲಿ ಕೆಲಸ ಮಾಡುತ್ತೇನೆ : ಸಿಸಿರ್ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next