Advertisement

Mumbai To Ranchi Flight: ವಿಮಾನದಲ್ಲೇ ರಕ್ತ ವಾಂತಿ ಮಾಡಿ ಪ್ರಯಾಣಿಕ ಮೃತ್ಯು…

09:16 AM Aug 22, 2023 | Team Udayavani |

ನಾಗ್ಪುರ: ಮುಂಬೈಯಿಂದ ರಾಂಚಿಗೆ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ರಕ್ತ ವಾಂತಿ ಮಾಡಿ ಮೃತ ಪಟ್ಟ ಘಟನೆ ಸೋಮವಾರ ತಡರಾತ್ರಿ ನಾಗ್ಪುರದಲ್ಲಿ ನಡೆದಿದೆ.

Advertisement

ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದೇವಾನಂದ್ ತಿವಾರಿ ಎಂಬುವರು ರಕ್ತ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ, ಕೂಡಲೇ ಸಿಬ್ಬಂದಿಗಳು ವಿಮಾನಯಾನ ಸಂಸ್ಥೆಗೆ ಮಾಹಿತಿ ನೀಡಿ ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿ ಪ್ರಯಾಣಿಕನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಈ ವೇಳೆ ತಪಾಸಣೆ ನಡೆಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ದೇವಾನಂದ್ ಈ ಮೊದಲು ಕ್ಷಯ ರೋಗದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು ಇದೆ ಕಾರಣದಿಂದ ಅವರು ಮೃತಪಟ್ಟಿರಬಹುದು ಎಂದು ಹೇಳಾಗುತ್ತಿದ್ದು ಸದ್ಯ ದೇವಾನಂದ್ ಅವರ ಮರಣೋತ್ತರ ಪರೀಕ್ಷೆ ಬಳಿಕ ನಿಖರ ಕಾರಣ ತಿಳಿದುಬರಲಿದೆ ಎನ್ನಲಾಗಿದೆ.

ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ವಿಮಾನ ಬಳಿಕ ರಾಂಚಿಗೆ ಪ್ರಯಾಣ ಬೆಳೆಸಿತು.

ಇದನ್ನೂ ಓದಿ: 15th BRICS Summit: ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next