Advertisement

IndiGo: ಬೆಂಗಳೂರು-ಭೋಪಾಲ್ ನಡುವೆ ಸಂಚರಿಸುವ ಇಂಡಿಗೋ ವಿಮಾನದಲ್ಲಿ ಸೀಟ್ ಕುಶನೇ ಮಾಯಾ!

04:16 PM Mar 07, 2024 | Team Udayavani |

ಭೋಪಾಲ್: ಗ್ರಾಹಕರ ಸೇವೆಯ ವಿಚಾರದಲ್ಲಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿದ್ದ ಇಂಡಿಗೋ ವಿಮಾನಯಾನ ಸಂಸ್ಥೆ ಇದೀಗ ಮತ್ತೆ ಸುದ್ದಿಯಲ್ಲಿದೆ, ಹೌದು ಬೆಂಗಳೂರಿನಿಂದ ಭೋಪಾಲ್ ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರ ಸೀಟಿನ ಕುಶನ್ ಮಾಯವಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

Advertisement

ಭೋಪಾಲ್ ಗೆ ಪ್ರಯಾಣಿಸಲು ಮಹಿಳಾ ಪ್ರಯಾಣಿಕರೊಬ್ಬರು ಬೆಂಗಳೂರಿನಲ್ಲಿ ಇಂಡಿಗೋ ವಿಮಾನ ಏರಿದ್ದಾರೆ ಬಳಿಕ ತನ್ನ ಸೀಟ್ ಬಳಿ ಹೋಗಿ ನೋಡಿದರೆ ಸೀಟ್ ಕುಶನ್ ಮಾಯವಾಗಿತ್ತು ಇದರಿಂದ ಶಾಕ್ ಆದ ಪ್ರಯಾಣಿಕ ಯವನಿಕಾ ರಾಜ್ ಶಾ ತನ್ನ ‘X’ ಖಾತೆಯಲ್ಲಿ ಸೀಟ್ ಕುಶನ್ ಮಾಯವಾಗಿರುವ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. ಸುಂದರವಾದ IndiGo6E ಕೂತಿದ್ದೇನೆ ಸುರಕ್ಷಿತವಾಗಿ ಇಳಿಯುತ್ತೇನೆ ಎಂದು ನಂಬಿದ್ದೇನೆ, ಇದು ನಿಮ್ಮ ಬೆಂಗಳೂರು ಭೋಪಾಲ್ ನಡುವೆ ಸಂಚರಿಸುವ ಇಂಡಿಗೋ 6E 6465 ವಿಮಾನ ಎಂದು ಬರೆದುಕೊಂಡಿದ್ದಾರೆ.

ಪ್ರತಿಕ್ರಿಯೆ ನೀಡಿದ ಏರ್‌ಲೈನ್ಸ್:
ಸೀಟ್ ಕುಶನ್ ಮಾಯವಾಗಿರುವ ವಿಚಾರ ಹಂಚಿಕೊಂಡ ಪ್ರಯಾಣಿಕ ಮಹಿಳೆಯ ಟ್ವೀಟ್ ಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆ, ಸ್ವಚ್ಛಗೊಳಿಸುವ ಉದ್ದೇಶದಿಂದ ವಿಮಾನದ ಸೀಟ್ ತೆಗೆದು ಇರಿಸಲಾಗಿದೆ ಪ್ರಯಾಣಿಕರ ಸುರಕ್ಷಿತ ಪ್ರಯಾಣದ ಉದ್ದೇಶದಿಂದ ವಿಮಾನದ ಸೀಟ್ ಸ್ವಚ್ಛಗೊಳಿಸಲು ಕುಶನ್ ತೆಗೆದು ಇರಿಸಲಾಗಿತ್ತು ಈ ಕೂಡಲೇ ವಿಮಾನ ಸಿಬಂದಿ ಸೀಟ್ ಕುಶನ್ ವ್ಯವಸ್ಥೆ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next