Advertisement

ಒಮಿಕ್ರಾನ್‌ಗೆ ಬರಲಿದೆ ಸ್ವದೇಶಿ ಲಸಿಕೆ

11:58 AM Jan 18, 2022 | Team Udayavani |

ಹೊಸದಿಲ್ಲಿ: ಕೊರೊನಾ ಸೋಂಕಿನ ನಿಯಂತ್ರಣಕ್ಕೆಂದು ಪುಣೆ ಮೂಲದ ಜಿನ್ನೋವ್‌ ಔಷಧ ತ ಯಾರಕ ಸಂಸ್ಥೆಯು ದೇಶದ ಮೊದಲ ಮೆಸೆಂಜರ್‌ ಆರ್‌ಎನ್‌ಎ (ಎಂಆರ್‌ಎನ್‌ಎ) ಲಸಿಕೆ ತಯಾರಿಸಿದೆ. ಅಂತಿಮ ಹಂತದ ಪ್ರಯೋ ಗ ದಲ್ಲಿರುವ ಆ ಲಸಿಕೆ ಇನ್ನು ಕೆಲ ದಿನಗಳಲ್ಲಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ.

Advertisement

ಏನು ಈ ಎಂಆರ್‌ಎನ್‌ಎ ಲಸಿಕೆ? ಸಾಮಾನ್ಯ ವಾಗಿ ಎಲ್ಲ ಲಸಿಕೆ ಗಳನ್ನು, ಸಕ್ರಿಯವಲ್ಲದ (ಡೆಡ್‌/ಇನ್‌ಆ್ಯಕ್ಟಿವ್‌) ಸೋಂಕಿನಿಂದ ತಯಾರಿಸಲಾಗುತ್ತದೆ. ಅದು, ಮನು ಷ್ಯನ ದೇಹ ವನ್ನು ಸೋಂಕಿಗೆ ಒಡ್ಡು ವಂತೆ ಮಾಡಿ, ಅದರ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸು ತ್ತದೆ. ಆದರೆ ಎಂಆರ್‌ಎನ್‌ಎ ಲಸಿಕೆಗೆ ಸೋಂಕನ್ನು ಬಳಕೆ ಮಾಡಲಾಗುವುದಿಲ್ಲ. ಅದರ ಬದಲಾಗಿ ಅದರ ಅನುವಂಶಿಕ ವಸ್ತುವನ್ನು ಬಳಕೆ ಮಾಡಲಾಗು ತ್ತದೆ.

ಇಳಿಕೆ: ಮಹಾರಾಷ್ಟ್ರದಲ್ಲಿ ಸೋಮವಾರ 31,111 ಹೊಸ ಕೇಸುಗಳು ದೃಢಪಟ್ಟಿದ್ದು, 24 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ, ಮುಂಬಯಿಯಲ್ಲಿ 5,956 ಹೊಸ ಕೇಸುಗಳು ದೃಢಪಟ್ಟಿವೆ. ದಿಲ್ಲಿಯಲ್ಲಿ ಕೂಡ 12,527 ಹೊಸ ಕೇಸು ಗಳು ದೃಢಪಟ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ.27.99ಕ್ಕೆ ಇಳಿಕೆಯಾಗಿದೆ. ರವಿವಾರ ದಿಂದ ಸೋಮವಾರದ ಅವಧಿಯಲ್ಲಿ 2,58,089 ಹೊಸ ಕೇಸುಗಳು ದೃಢಪಟ್ಟಿವೆ. 385 ಮಂದಿ ಅಸುನೀಗಿದ್ದಾರೆ.

ಹೂವಿನ ದಳದಲ್ಲಿ ಕೊರೊನಾ ಔಷಧ!: ಹಿಮಾಲಯ ಪ್ರಾಂತ್ಯದಲ್ಲಿ ಬೆಳೆಯುವ, ರೊಡೊ ಡೆಂಡ್ರೊನ್‌ ಅಬೋìರಿಯಂ ಎಂಬ ವೈಜ್ಞಾನಿಕ ಹೆಸರುಳ್ಳ ಗಿಡದ ಹೂವಿನಲ್ಲಿ ಕೊರೊನಾ ನಿಯಂತ್ರಿಸಬಲ್ಲ ಗುಣಗಳಿವೆ ಎಂಬುದನ್ನು ಮಂಡಿ ಐಐಟಿಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸ್ಥಳೀಯವಾಗಿ ಬುರಾಂಶ್‌ ಎಂದು ಕರೆಯಲ್ಪಡುವ ಈ ಹೂವಿನಲ್ಲಿ ಆ್ಯಂಟಿ ವೈರಲ್‌ ಗುಣಗಳಿದ್ದು ಇವು ಕೊರೊನಾ ವೈರಾಣುಗಳನ್ನು ಹಿಮ್ಮೆಟ್ಟಿಸಬಲ್ಲವು ಎಂದು ಅವರು ತಿಳಿಸಿದ್ದಾರೆ.

ಹೊಸ ಮಾರ್ಗಸೂಚಿ ಬಿಡುಗಡೆ
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾ ಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ‌, ಕೊರೊನಾ ಚಿಕಿತ್ಸೆಯ ಹೊಸ ಮಾರ್ಗಸೂಚಿ ಗಳನ್ನು ಬಿಡುಗಡೆ ಮಾಡಿದೆ. ಇದರ ಜತೆಗೆ, ರೆಮ್‌ಡಿಸೀವರ್‌ ಔಷಧಯನ್ನು ಗಂಭೀರ ಪರಿಸ್ಥಿತಿಗೆ ತಲುಪಿರುವ ಸೋಂಕಿತರಿಗಷ್ಟೇ ನೀಡಬೇಕು ಎಂದು ಹೇಳಿದೆ.  ಕೊರೊನಾದ ಸಾಮಾನ್ಯ ಲಕ್ಷಣಗಳಿದ್ದು, ಉಸಿರಾಟದ ತೊಂದರೆ ಅಥವಾ ಆಮ್ಲಜನಕದ ಕೊರತೆ ಅನುಭವಿಸದೇ ಇರುವವರು ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಬೇಕು ಎಂದು ಸಲಹೆ ಮಾಡಿದೆ.  ಗುರುತರ ಲಕ್ಷಣಗಳಿರು ವವರಿಗೆ ಉಸಿರಾಟದ ತೊಂದರೆ ಅಥವಾ ಆಮ್ಲಜನಕ ಸ್ಯಾಚುರೇಷನ್‌ ಮಟ್ಟದ ಶೇ. 90ರೊಳಗಿದ್ದರೆ ಅವರಿಗೆ ಹೆಚ್ಚುವರಿ ಆಮ್ಲ ಜನಕ ಸರಬರಾಜು ಮಾಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next