Advertisement
ಇದೇ ಕಾರಣದಿಂದ 2018ರಿಂದ ಇಲ್ಲಿಯವರೆಗೆ ನಡೆದ ಚಂಡಮಾರುತ ದಿಂದ ಆಗಿರುವ ಕೆಲವು ಭಾಗದ ಹಾನಿ ಯನ್ನು ದುರಸ್ತಿ ಮಾಡುವ ಕಾರ್ಯ ವಿವಿಧ ಕಾರಣಗಳ ನೆಪ ದಿಂದ ಬಾಕಿ ಯಾಗಿದೆ. ಅದರಲ್ಲಿಯೂ ಹಿಂದಿನ ವರ್ಷಗಳಲ್ಲಿ ಚಂಡಮಾರುತದ ಪ್ರಭಾವದಿಂದ ಉಂಟಾದ ಸಮುದ್ರ ಕೊರೆತಕ್ಕೆ ತುರ್ತು ನೆಲೆಯಲ್ಲಿ ಸರಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವಿತ ಕಾಮಗಾರಿ ಇನ್ನೂ ಅನು ಮೋದನೆಯನ್ನೇ ಕಂಡಿಲ್ಲ!
2018-19ರಲ್ಲಿ “ಓಖೀ’ ಚಂಡಮಾ ರುತದ ಪ್ರಭಾವದಿಂದ ಉಂಟಾದ ಸಮುದ್ರ ಕೊರೆತ ಸರಿಪಡಿಸಲು 13.57 ಕೋ.ರೂ.ಗಳ ಪ್ರಸ್ತಾವ ಸರಕಾರಕ್ಕೆ ಕಳುಹಿಸಲಾಗಿತ್ತು. 2019 – 20ರಲ್ಲಿ “ಕ್ಯಾರ್’ ಹಾಗೂ “ಮಹಾ’ ಚಂಡಮಾರುತದ ಪ್ರಭಾವ ದಿಂದ ಉಂಟಾದ ಸಮುದ್ರ ಕೊರೆತ ಸರಿಪಡಿಸಲು 6.09 ಕೋ.ರೂ.ಗಳ ಪ್ರಸ್ತಾವ ಸಲ್ಲಿಸಲಾಗಿತ್ತು. 2020- 21ರಲ್ಲಿ ಮಳೆಗಾಲದ ಸಮುದ್ರ ಕೊರೆತ ಸರಿಪಡಿಸಲು 1.88 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2020- 21ರಲ್ಲಿ “ತೌಕ್ತೆ’ ಚಂಡಮಾರುತದ ಪ್ರಭಾವ ದಿಂದ ಸಮುದ್ರ ಕೊರೆತ ಆಗಿರುವುದನ್ನು ಸರಿ ಮಾಡಲು 2 ಕೋ.ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಇನ್ನೂ ಅನುಮೋದನೆ ಲಭಿಸಿಲ್ಲ. ಈ ಬಾರಿ 3 ಕೋ.ರೂ ನಿರೀಕ್ಷೆ
2023ನೇ ಸಾಲಿನ ಮಳೆಗಾಲಕ್ಕೆ ಗುರುತಿಸಿದ ಇತರ ಸಂಭಾವ್ಯ ಸಮುದ್ರ ಕೊರೆತ ಪ್ರದೇಶ, ಅಲ್ಲಿ ತುರ್ತು ನೆಲೆಯಲ್ಲಿ ಆವಶ್ಯಕ 3 ಕೋ.ರೂ.ಗಳ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಸೋಮೇಶ್ವರ-ಬಟ್ಟಪ್ಪಾಡಿ, ಉಳ್ಳಾಲ ಸೀ ಗ್ರೌಂಡ್ ಪ್ರದೇಶಕ್ಕೆ 1.50 ಕೋ.ರೂ., ಮಂಗಳೂರು ನಗರ ಉತ್ತರದ ಸುರತ್ಕಲ್ ಲೈಟ್‌ಹೌಸ್, ಮುಕ್ಕ ಪ್ರದೇಶಕ್ಕೆ 1 ಕೋ.ರೂ., ಮೂಡುಬಿದಿರೆ ಕ್ಷೇತ್ರದ ಸಸಿಹಿತ್ಲು ಪ್ರದೇಶಕ್ಕೆ 50 ಲಕ್ಷ ರೂ.ಗಳ ಪ್ರಸ್ತಾವನೆ ಈ ಬಾರಿ ಸರಕಾರಕ್ಕೆ ಹೊಸದಾಗಿ ಸಲ್ಲಿಕೆಯಾಗಿದೆ.
Related Articles
ಈ ಹಿಂದಿನ ಚಂಡಮಾರುತದಿಂದ ಬಹು ಹಾನಿಯಾಗಿ ಜನರಿಗೆ ಸಮಸ್ಯೆ ಆಗುತ್ತಿದ್ದ ಆಯ್ದ ತುರ್ತು ಕಾಮಗಾರಿಗಳನ್ನು ಜಿಲ್ಲೆಯ ಕೆಲವು ಕಡೆ ನಡೆಸಲಾಗಿದೆ. ಅದರಂತೆ ಸುರತ್ಕಲ್‌ನ ಲೈಟ್‌ಹೌಸ್ ಬೀಚ್ ರಸ್ತೆ ಕಳೆದ “ತೌಕ್ತೆ’ ಚಂಡ ಮಾರುತದಿಂದ ಸಮುದ್ರ ಕೊರೆತಕ್ಕೀಡಾಗಿ ಕೊಚ್ಚಿಕೊಂಡು ಹೋದ ಬಳಿಕ ಬಹುತೇಕ ಸಂಪರ್ಕ ಕಳೆದುಕೊಂಡಿತ್ತು.ಇದೀಗ ಇಲ್ಲಿ ಡಾಮರು ಹಾಕಿ, ವಾಹನ ಓಡಾಟ, ವಾಕಿಂಗ್‌ಗೆ ಅನುಕೂಲ ಕಲ್ಪಿಸಲಾಗಿದೆ. ಇಂತಹ ಕೆಲವು ಕಾಮಗಾರಿ ಮಾತ್ರ ಈಗ ನಡೆದಿದೆ.
Advertisement
ದ.ಕ.ಜಿಲ್ಲೆ: ಸಂಭಾವ್ಯ ಸಮುದ್ರ ಕೊರೆತ ಬಾಧಿತ ಪ್ರದೇಶಗಳು1. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಬಟ್ಟಪ್ಪಾಡಿ
2. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲ
3. ಉಳ್ಳಾಲ ನಗರಸಭಾ ವ್ಯಾಪ್ತಿಯ ಸಿ ಗ್ರೌಂಡ್
4. ಉಳ್ಳಾಲ ನಗರಸಭಾ ವ್ಯಾಪ್ತಿಯ ಮೊಗವೀರಪಟ್ಣ
5. ಮಂಗಳೂರು ಪಾಲಿಕೆ ವ್ಯಾಪ್ತಿಯ ಮೀನಕಳಿಯ
6. ಮಂಗಳೂರು ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಲೈಟ್‌ಹೌಸ್ ಬಳಿ
7. ಮಂಗಳೂರು ಪಾಲಿಕೆ ವ್ಯಾಪ್ತಿಯ ಮುಕ್ಕ
8. ಹಳೆಯಂಗಡಿ ಗ್ರಾ.ಪಂ. ವ್ಯಾಪ್ತಿಯ ಸಸಿಹಿತ್ಲು. ಅನುಮೋದನೆಗೆ ಕ್ರಮ
ಸಮುದ್ರ ಕೊರೆತ ತಡೆ ಕಾಮಗಾರಿಯ ಪ್ರಸ್ತಾವಿತ ಕೆಲವು ಯೋಜನೆಗೆ ಶೀಘ್ರ ಅನು ಮೋದನೆ ನೀಡಲು ಈಗಾಗಲೇ ಸೂಚನೆ ನೀಡಲಾ ಗಿದೆ. ಹಾಗೂ ಸುರತ್ಕಲ್ ಲೈಟ್‌ಹೌಸ್, ಉಚ್ಚಿಲ ಬಟ್ಟಪ್ಪಾಡಿ ಹಾಗೂ ಮೀನಕಳಿಯದಲ್ಲಿ 2022-23ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಅನುಮೋದನೆಯಾದ ಯೋಜನೆಯನ್ನು ತತ್‌ಕ್ಷಣ ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ.
-ಮಂಕಾಳ ವೈದ್ಯ, ಸಚಿವರು,
ಮೀನುಗಾರಿಕೆ ಮತ್ತು ಬಂದರು ಇಲಾಖೆ - ದಿನೇಶ್ ಇರಾ