ಮುಂಬಯಿ : ಈಚೆಗೆ ಪ್ರಕಟಗೊಂಡ ದೇಶದ ಸ್ಥೂಲ ಆರ್ಥಿಕಾಭಿವೃದ್ಧಿಯ ಅಂಕಿ ಅಂಶಗಳು ಧನಾತ್ಮಕವಾಗಿ ತೋರಿ ಬಂದುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ನಿರಂತರ 8ನೇ ದಿನದ ವಹಿವಾಟಿನಲ್ಲಿ 112.78 ಅಂಕಗಳ ಮುನ್ನಡೆಯನ್ನು ಸಂಪಾದಿಸಿ ದಿನದ ವಹಿವಾಟನ್ನು 34,305.43 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.75 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,528.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ನಿರಂತರ ಎಂಟನೇ ದಿನದ ಏರಿಕೆಯನ್ನು ಕಾಣುತ್ತಿರುವುದು ಈ ವರ್ಷದಲ್ಲಿ ಈ ತನಕದ ಅವಧಿಗೆ ಮೊದಲ ಬಾರಿಯಾಗಿದೆ. ಇಂದಿನ ವಹಿವಾಟಿನಲ್ಲಿ ಹೀರೋ ಮೊಟೋ ಕಾರ್ಪ್, ಕೋಟಕ್ ಮಹೀಂದ್ರ ಬ್ಯಾಂಕ್, ಅದಾನಿ ಪೋಟ್‌ರ, ಬಜಾಜ್ ಆಟೋ, ಮಹೀಂದ್ರ ಆ್ಯಂಡ್ ಮಹಿಂದ್ರ ಟಾಪ್ ಗೇನರ್ ಎನಿಸಿಕೊಂಡವು.
ಇದೇ ವೇಳೆ ಟಾಟಾ ಮೋಟರ್, ಇನ್‌ಫೋಸಿಸ್, ಎಸ್‌ಬಿಐ, ಒಎನ್‌ಜಿಸಿ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಇಂದು ಮುಂಬಯಿ ಶೇರು ಪೇಟೆಯಲ್ಲಿ ಒಟ್ಟು 3,049 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,365 ಶೇರುಗಳು ಮುನ್ನಡೆ ಕಂಡವು; 1,478 ಶೇರುಗಳು ಹಿನ್ನಡೆಗೆ ಗುರಿಯಾದವು; 206 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.