Advertisement

ದೇಶದಲ್ಲಿ 1ಲಕ್ಷ ದಾಟಿದ ಕೋವಿಡ್-19 ಸೋಂಕಿತ ಪ್ರಕರಣಗಳು, ಸಾವಿನ ಸಂಖ್ಯೆ 3,000ಕ್ಕೆ ಏರಿಕೆ

02:28 PM May 19, 2020 | Mithun PG |

ನವದೆಹಲಿ: ಭಾರತದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುವಾಗಲೇ ಕೋವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಮಂಗಳವಾರದ ವೇಳೆಗೆ ದೇಶದಲ್ಲಿ ವೈರಾಣು ಪೀಡಿತರ ಸಂಖ್ಯೆ 1 ಲಕ್ಷ ಗಡಿ ದಾಟಿದ್ದು, ಮೃತರ ಪ್ರಮಾಣ ಕೂಡ 3,000 ದ ಗಡಿ ದಾಟಿದೆ.

Advertisement

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 5,242 ಹೊಸ ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡುಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಪರೀಕ್ಷೆಗೊಳಪಡಿಸಲಾಗಿದ್ದ ಶೇ. 50 ರಷ್ಟು ಜನರಲ್ಲಿ ಪಾಸಿಟಿವ್ ಕಂಡುಬರುತ್ತಿದೆ.

4ನೇ ಹಂತದ ಲಾಕ್ ಡೌನ್ ನಲ್ಲಿ ಹಲವು ರಾಜ್ಯಗಳಲ್ಲಿ ಸಾರಿಗೆ, ಅಂಗಡಿ ಮುಂಗಟ್ಟು, ಮಾರುಕಟ್ಟೆ, ಸಲೂನ್  ಸೇರಿದಂತೆ ಹಲವು ಚಟುವಟಿಕೆಗಳು ಆರಂಭಗೊಂಡಿದೆ. ಕಂಟೈನ್ ಮೆಂಟ್ ಝೋನ್ ಗಳಲ್ಲಿ ಮಾತ್ರ ನಿರ್ಭಂದಗಳು ಮುಂದುವರೆದಿದೆ. ಅದಾಗ್ಯೂ ಶಾಲಾ, ಕಾಲೇಜು, ಚಿತ್ರಮಂದಿರ, ಮಾಲ್ ಗಳು ಮುಂತಾದವುಗಳ ಮೇ 31 ರವರೆಗೂ ಲಾಕ್ ಡೌನ್ ಆಗಿರಲಿವೆ.

ಮಹಾರಾಷ್ಟರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು ಈವರೆಗೂ ಸುಮಾರು 35,000ಕ್ಕಿಂತ ಹೆಚ್ಚು ಮಂದಿ ವೈರಾಣುವಿನಿಂದ ಬಳಲುತ್ತಿದ್ದು, 1,249 ಜನರು ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲೂ ಕೂಡ 11,760 ಮಂದಿ ವೈರಸ್ ಗೆ ತುತ್ತಾಗಿದ್ದು 81 ಜನರು ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ ಕೋವಿಡ್ 19 ಗೆ ಬಲಿಯಾದವರ ಸಂಖ್ಯೆ 694 ಕ್ಕೆ ಏರಿದ್ದು , 11,746 ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಕೋವಿಡ್ 19 ವೈರಸ್ ಕಾಣಿಸಿಕೊಂಡು  78 ದಿನಗಳು ಕಳೆದಿದ್ದು, ಈವರೆಗೂ   1,00,311 ಜನರಿಗೆ ಸೋಂಕು ಧೃಢಪಟ್ಟಿದ್ದು, 3,081 ಜನರು ವೈರಸ್ ಕಾರಣದಿಂದ ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next