Advertisement

ಸೋಮವಾರ ಭಾರತದ ವಿಶ್ವಕಪ್‌ ತಂಡ ಪ್ರಕಟ

02:22 AM Apr 09, 2019 | Team Udayavani |

ಹೊಸದಿಲ್ಲಿ: ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಗಾಗಿ ಭಾರತ ತಂಡವನ್ನು ಮುಂದಿನ ಸೋಮವಾರ (ಎ. 15) ಮುಂಬಯಿ ಯಲ್ಲಿ ಪ್ರಕಟಿಸಲಾಗುವುದು ಎಂದು ಕ್ರಿಕೆಟ್‌ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ತಿಳಿಸಿದೆ.

Advertisement

ವಿಶ್ವಕಪ್‌ ಪಂದ್ಯಾವಳಿಗೆ ತಂಡ ವನ್ನು ಪ್ರಕಟಿಸಲು ಎ. 23 ಅಂತಿಮ ದಿನವಾಗಿದ್ದು, ಬಿಸಿಸಿಐ ಒಂದು ವಾರ ಮೊದಲೇ ತಂಡವನ್ನು ಅಂತಿಮಗೊಳಿಸಲಿದೆ.

ಸೋಮವಾರ ಹೊಸದಿಲ್ಲಿಯಲ್ಲಿ ಸಭೆ ಸೇರಿದ ಸಿಒಎ ಮತ್ತು ಬಿಸಿಸಿಐಯ ಮೂವರು ಸದಸ್ಯರು ಐಪಿಎಲ್‌ ಮತ್ತು ಕ್ರಿಕೆಟ್‌ ಆಪ ರೇಶನ್ಸ್‌ಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದರು. ಈ ವೇಳೆ “ಎಂ.ಎ. ಚಿದಂಬರಂ ಸ್ಟೇಡಿಯಂ’ನ 3 ಸ್ಟಾಂಡ್‌ಗಳ ಸಮಸ್ಯೆ ಬಗೆಹರಿಸಲು ಒಂದು ವಾರದ ಗಡುವು ವಿಧಿಸಿದರು. ಇಲ್ಲವಾದರೆ ಮೇ 12ರ ಐಪಿಎಲ್‌ ಫೈನಲ್‌ ಪಂದ್ಯವನ್ನು ಚೆನ್ನೈಯಿಂದ ಹೈದರಾಬಾದ್‌ಗೆ ಹಾಗೂ ಪ್ಲೇ ಆಫ್, ಎಲಿಮಿನೇಟರ್‌ ಪಂದ್ಯಗಳನ್ನು ಬೆಂಗಳೂರಿಗೆ ವರ್ಗಾಯಿಸುವ ಎಚ್ಚರಿಕೆ ನೀಡಲಾಯಿತು.

2012ರಿಂದಲೂ ವಿವಾದ…
ಚೆನ್ನೈ ಸ್ಟೇಡಿಯಂನ ಐ, ಜೆ ಮತ್ತು ಕೆ ಸ್ಟಾಂಡ್‌ಗಳು 2012ರಿಂದಲೂ ವಿವಾದದಲ್ಲಿದ್ದು, ಇದನ್ನು ಮುಂದಿನ ಒಂದು ವಾರದೊಳಗೆ ಬಗೆಹರಿಸ ಬೇಕೆಂದು ತಮಿಳುನಾಡು ಕ್ರಿಕೆಟ್‌ ಮಂಡಳಿಗೆ ಸೂಚಿಸಲಾಗಿದೆ. ಈ 3 ಸ್ಟಾಂಡ್‌ಗಳಿಗೆ ಸ್ಥಳೀಯ ನಗರಪಾಲಿಕೆ ಕ್ಷಮತೆಯ ಪ್ರಮಾಣಪತ್ರ ನೀಡದಿರು ವುದರಿಂದ, ಕ್ರಿಕೆಟ್‌ ಪಂದ್ಯಗಳ ವೇಳೆ ಇಲ್ಲಿ ವೀಕ್ಷಕರಿಗೆ ನಿರ್ಬಂಧ ವಿಧಿಸಲಾಗುತ್ತಿದೆ.

ಸ್ಟಾಂಡ್‌ ವಿವಾದ: ಐಪಿಎಲ್‌ ಫೈನಲ್‌ ಶಿಫ್ಟ್?
“ಈ ಸ್ಟಾಂಡ್‌ಗಳು ಒಟ್ಟು 12 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿವೆ. ನೇರ ಪ್ರಸಾರದ ವೇಳೆ ಇದು ವಿಲಕ್ಷಣವಾಗಿ ಕಾಣುತ್ತದೆ. ಭಾರತ-ಪಾಕಿಸ್ಥಾನ ನಡುವೆ ನಡೆದ 2012ರ ಏಕದಿನ ಪಂದ್ಯದ ವೇಳೆಯಷ್ಟೇ ಇದಕ್ಕೆ ರಿಯಾಯಿತಿ ನೀಡಲಾಗಿತ್ತು. ಐಪಿಎಲ್‌ನಲ್ಲಿ ಚೆನ್ನೈ ಮುಂದಿನ ಸುತ್ತು ಪ್ರವೇಶಿಸಿದರೆ ತವರಿನ ಅನುಭವವನ್ನು ಕಳೆದುಕೊಳ್ಳಬಾರದು. ಹೀಗಾಗಿ ರಾಜ್ಯ ಕ್ರಿಕೆಟ್‌ ಮಂಡಳಿಗೆ ಒಂದು ವಾರದ ಗಡುವು ನೀಡಲಾಗಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next