Advertisement

ವಿಶ್ವ ಕಪ್‌ ಕ್ರಿಕೆಟ್‌: ಮುಂಬಯಿಯಲ್ಲಿ ಎ.15ರಂದು ಭಾರತ ತಂಡ ಆಯ್ಕೆ

09:03 AM Apr 09, 2019 | Sathish malya |

ಹೊಸದಿಲ್ಲಿ : ಐಸಿಸಿ ವಿಶ್ವ ಕಪ್‌ ಗೆ ಭಾರತದ 15 ಸದಸ್ಯರ ಭಾರತೀಯ ತಂಡವನ್ನು ಇದೇ ಎಪ್ರಿಲ್‌ 15ರಂದು ಮುಂಬಯಿಯಲ್ಲಿ ಆಯ್ಕೆ ಮಾಡಲಾಗುವುದು.

Advertisement

ಇಂದು ಸೋಮವಾರ ನಡೆದ ಸಭೆಯಲ್ಲಿ ಆಡಳಿತಗಾರರ ಸಮಿತಿ (ಸಿಓಎ) ಮತ್ತು ಪದಾಧಿಕಾರಿಗಳು, ಭಾರತೀಯ ತಂಡವನ್ನು ಆಯ್ಕೆ ಮಾಡುವ ದಿನವನ್ನು ನಿರ್ಧರಿಸಿದರು.

ICC ವಿಶ್ವ ಕಪ್‌ ಕ್ರಿಕೆಟ್‌ ಗೆ ತಂಡ ಪ್ರಕಟಿಸುವ ಕೊನೇ ದಿನಾಂಕ ಎಪ್ರಿಲ್‌ 23 ಆಗಿದೆ. ಆದರೆ ಇದಕ್ಕೆ ಎಂಟು ದಿನಗಳ ಮೊದಲೇ ಭಾರತೀಯ ತಂಡವನ್ನು ಪ್ರಕಟಿಸಲು ಬಿಸಿಸಿಐ ನಿರ್ಧರಿಸಿದೆ.

ವಿಶ್ವ ಕಪ್‌ ಕ್ರಿಕೆಟ್‌ ಮೇ 30ರಂದು ಲಂಡನ್‌ ನಲ್ಲಿ ಆರಂಭಗೊಳ್ಳಲಿದೆ. ಈ ನಡುವೆ ಕಳೆದ ವರ್ಷಗಳ ಲೆಕ್ಕಪತ್ರಗಳ ಹೊಂದಾಣಿಕೆಯ ಫ‌ಲವಾಗಿ ಕ್ರಿಕೆಟ್‌ ಆಸ್ಟ್ರೇಲಿಯದಿಂದ ಬಿಸಿಸಿಐ 2.09 ಕೋಟಿ ರೂ.ಗಳನ್ನು ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next