Advertisement

ನಿರುದ್ಯೋಗ ಪ್ರಮಾಣ ಶೇ.8.3ಕ್ಕೇರಿಕೆ: ಸಿಎಂಐಇ ವರದಿ

12:09 AM Jan 02, 2023 | Team Udayavani |

ಹೊಸದಿಲ್ಲಿ: ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ.8.3ಕ್ಕೆ ಏರಿಕೆಯಾಗಿದೆ. ನಿರುದ್ಯೋಗ ಇಷ್ಟೊಂದು ಏರಿಕೆಯಾಗಿದ್ದು, 16 ತಿಂಗಳಲ್ಲೇ ಮೊದಲು ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ(ಸಿಎಂಐಇ) ವರದಿ ಹೇಳಿದೆ.

Advertisement

ರವಿವಾರ ಈ ದತ್ತಾಂಶ ಬಿಡುಗಡೆ ಯಾಗಿದೆ. ನವೆಂಬರ್‌ ತಿಂಗಳಲ್ಲಿ ದೇಶದ ನಗರ ಪ್ರದೇಶಗಳಲ್ಲಿ ನಿರುದ್ಯೋಗವು ಶೇ.8.96ರಷ್ಟಿತ್ತು. ಡಿಸೆಂಬರ್‌ನಲ್ಲಿ ಅದು ಶೇ.10.09ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣವು ನವೆಂಬರ್‌ನಲ್ಲಿ ಶೇ.7.55 ಇದ್ದಿದ್ದು, ಡಿಸೆಂಬರ್‌ಗೆ ಶೇ.7.44ಕ್ಕೆ ಇಳಿಕೆಯಾಗಿದೆ.

ಗಮನಾರ್ಹ ಅಂಶವೆಂದರೆ ಡಿಸೆಂಬರ್‌ ತಿಂಗಳಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣವು ಶೇ.37.1ರಷ್ಟು ಹೆಚ್ಚಳವಾಗಿದ್ದು, 2022ರ ಜನವರಿ ಅನಂತರ ಇಷ್ಟೊಂದು ಏರಿಕೆಯಾಗಿದ್ದು ಇದೇ ಮೊದಲು ಎಂದೂ ವರದಿ ಹೇಳಿದೆ.

ಶೇ.11 ಕುಸಿದ ರೂ.!
ಡಾಲರ್‌ ಎದುರು ರೂಪಾಯಿ ಮೌಲ್ಯ ಕಳೆದ ವರ್ಷ ಶೇ.11ರಷ್ಟು ಕುಸಿತ ಕಂಡಿತ್ತು. 2013ರ ಬಳಿಕ ರೂಪಾಯಿಯ ಕಳಪೆ ಸಾಧನೆ ಇದು. ಅಲ್ಲದೇ ಏಷ್ಯಾದ ಕರೆನ್ಸಿಗಳ ಪೈಕಿ ಅತೀ ಹೆಚ್ಚು ಕುಸಿತ ದಾಖಲಿಸಿದ ಕರೆನ್ಸಿ ಎಂಬ ಕುಖ್ಯಾತಿಗೂ ರೂಪಾಯಿ ಪಾತ್ರವಾಗಿದೆ. 2021ರ ಅಂತ್ಯದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 74.29 ರೂ. ಆಗಿತ್ತು. 2022ರ ಡಿಸೆಂಬರ್‌ ಅಂತ್ಯಕ್ಕೆ ಇದು 82.61 ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next