Advertisement

ಅಂಪಾಯರ್‌ಗಳ ವೇತನ ದೇಶಿ ಕ್ರಿಕೆಟಿಗರ ವೇತನಕ್ಕಿಂತ ಜಾಸ್ತಿ!

09:19 AM Jun 04, 2018 | |

ಮುಂಬಯಿ: ಭಾರತ ಕ್ರಿಕೆಟ್‌ ಮಂಡಳಿಯ (ಬಿಸಿಸಿಐ) ಪದಾಧಿಕಾರಿಗಳು ಮತ್ತು ನ್ಯಾಯ ಪೀಠ ನಿಯೋಜಿತ ಆಡಳಿತಾಧಿಕಾರಿಗಳ ನಡುವಿನ ವಾಗ್ವಾದ ಜೋರಾಗಿದೆ. ಇತ್ತೀಚೆಗಷ್ಟೇ ಅಂಪಾಯರ್‌ಗಳು ಮತ್ತು ಕ್ಯುರೇಟರ್‌ಗಳ ವೇತನವನ್ನು ಆಡಳಿತಾಧಿಕಾರಿಗಳು ಹೆಚ್ಚಿಸಿದ್ದರು. ಈ ವೇಳೆ ದೇಶಿ ಆಟಗಾರರ ವೇತನಕ್ಕಿಂತ ಅಂಪಾಯರ್‌ಗಳ ವೇತನವೇ ಹೆಚ್ಚಾಗಿದೆ ಎಂದು ಕೆಲವು ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಪದಾಧಿಕಾರಿಗಳು ತಕರಾರು ತೆಗೆದಿದ್ದಾರೆ. ಆದ್ದರಿಂದ ಜೂ. 22ಕ್ಕೆ ವಿಶೇಷ ಸಭೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ದಿನಕ್ಕೆ 40 ಸಾವಿರ
ವೇತನ ಪರಿಷ್ಕರಣೆಯ ಪ್ರಕಾರ ಅಂಪಾಯರ್‌ಗಳು ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ದಿನವೊಂದಕ್ಕೆ ತಲಾ 40,000 ರೂ. ಪಡೆಯುತ್ತಾರೆ. ಸೀಮಿತ ಓವರ್‌ಗಳ ಪಂದ್ಯವಾದರೆ ದಿನಕ್ಕೆ 20,000 ರೂ. ಪಡೆಯಲಿದ್ದಾರೆ. ಆದರೆ ಆಟಗಾರರ ವೇತನ ದಿನಕ್ಕೆ 35,000 ರೂ. ಮಾತ್ರ. ಇಂಥ ತಾರತಮ್ಯ ಏಕೆ, ಆಟಗಾರರ ವೇತನ ಏಕೆ ಕಡಿಮೆಯಾಗಿದೆ ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿ, ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಮುಖ್ಯಸ್ಥ ನಿರಂಜನ್‌ ಶಾ ತಕರಾರು ತೆಗೆದಿದ್ದಾರೆ.  

10 ಬೇಡಿಕೆಗಳ ನೋಟಿಸ್‌
ಇದೇ ಕಾರಣಕ್ಕೆ 10 ಬೇಡಿಕೆಗಳ ನೋಟಿಸೊಂದನ್ನು 20 ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಆದರೆ ಈ ವಿಶೇಷ ಸಭೆಗೆ ಆಡಳಿತಾಧಿಕಾರಿಗಳು ಅವಕಾಶ ನೀಡಿಲ್ಲ. ಇದು ಬಿಸಿಸಿಐ ಒಳಗಿನ ತಿಕ್ಕಾಟ ಬಿಗಡಾಯಿಸುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next