Advertisement

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಅಭಿಯಾನಕ್ಕೆ ಭಾರತದ ಎರಡು ಫುಟ್ ಬಾಲ್ ಕ್ಲಬ್‌

11:58 AM Apr 08, 2020 | keerthan |

ನವದೆಹಲಿ: ಭಾರತದ ಎರಡು ಪ್ರಮುಖ ಫ‌ುಟ್‌ ಬಾಲ್‌ ಕ್ಲಬ್‌ಗಳಾದ ಮೋಹನ್‌ ಬಗಾನ್‌ ಮತ್ತು ಈಸ್ಟ್‌ ಬೆಂಗಾಲ್‌ ಯುನೈಟೆಡ್‌ ನೇಶನ್ಸ್‌ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಆಯೋಜಿಸುತ್ತಿರುವ ಜಾಗತಿಕ ಅಭಿಯಾನದಲ್ಲಿ ಸೇರಿಕೊಳ್ಳಲಿವೆ.

Advertisement

ವಿಶ್ವದೆಲ್ಲೆಡೆ ಕೋವಿಡ್-19 ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ವೇಳೆ ಜನರು ಮನೆಯಲ್ಲಿಯೂ ಸಕ್ರಿಯರಾಗಿ ಇರುವಂತೆ ಪೋತ್ಸಾಹಿಸುವುದು ಜಾಗತಿಕ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಇಂದು ಮಾತ್ರವಲ್ಲದೇ ಪ್ರತಿದಿನ ನಾವು ಕೋವಿಡ್-19 ವಿರುದ್ಧ ಹೋರಾಡಬೇಕಾಗುತ್ತದೆ. ಇದಕ್ಕೆ ಇಡೀ ಜಗತ್ತು ಒಂದಾಗಿದೆ. ಈ ಹಿನ್ನೆಲೆಯಲ್ಲಿ ನೀವೆಲ್ಲ ಮನೆಯಲ್ಲಿ ಆರೋಗ್ಯವಾಗಿರಿ ಎಂಬ ಸಂದೇಶವನ್ನು ಈ ಅಭಿಯಾನದ ವೇಳೆ ಜನರಿಗೆ ತಿಳಿಸಲಾಗುತ್ತದೆ.

ಆರೋಗ್ಯವಂತ ವಯಸ್ಕರು ಕಡಿಮೆ ಪಕ್ಷ 30ನಿಮಿಷ ಮತ್ತು ಮಕ್ಕಳು 60 ನಿಮಿಷ ಪ್ರತಿದಿನ ದೈಹಿಕ ವ್ಯಾಯಾಮ ನಡೆಸಬೇಕು ಎಂದು ವಿಶ್ವ ಆರೋಗ್ಯ  ಸಂಸ್ಥೆ ತಿಳಿಸಿದೆ. ಈ ವಿಷಯವನ್ನು ಕೂಡ ಅಭಿಯಾನದ ವೇಳೆ ತಿಳಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next