Advertisement

Test Match; ಭಾರತದ ಆಸ್ಟ್ರೇಲಿಯ ಪ್ರವಾಸ; ಪರ್ತ್‌ನಲ್ಲಿ ಮೊದಲ ಟೆಸ್ಟ್‌

12:02 AM Mar 20, 2024 | Team Udayavani |

ಮೆಲ್ಬರ್ನ್: ಟೀಮ್‌ ಇಂಡಿಯಾದ ಈ ಬಾರಿಯ ವರ್ಷಾಂ ತ್ಯದ ಪ್ರವಾಸ ತಾಣ ಆಸ್ಟ್ರೇಲಿಯ. ಈ ವೇಳೆ 5 ಪಂದ್ಯಗಳ ಸುದೀರ್ಘ‌ ಟೆಸ್ಟ್‌ ಸರಣಿಯಲ್ಲಿ ಭಾರತ ಪಾಲ್ಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ “ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ ಸಂಭಾವ್ಯ ವೇಳಾಪಟ್ಟಿಯೊಂದನ್ನು ಪ್ರಕಟಿಸಿದ್ದು, ಇದರಂತೆ ಪರ್ತ್‌ನಲ್ಲಿ ಮೊದಲ ಟೆಸ್ಟ್‌ ನಡೆಯಲಿದೆ.

Advertisement

ಉಳಿದಂತೆ ಅಡಿಲೇಡ್‌, ಬ್ರಿಸ್ಬೇನ್‌, ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ಉಳಿದ 4 ಟೆಸ್ಟ್‌ಗಳನ್ನು ಆಡಲಾಗುವುದು. ಅಡಿಲೇಡ್‌ ಓವಲ್‌ನಲ್ಲಿ ದ್ವಿತೀಯ ಟೆಸ್ಟ್‌ ನಡೆಯಲಿದ್ದು, ಇದು ಹಗಲು-ರಾತ್ರಿ ಪಂದ್ಯ ಆಗಿರಲಿದೆ. ಬ್ರಿಸ್ಬೇನ್‌ನಲ್ಲಿ 3ನೇ ಟೆಸ್ಟ್‌ ನಡೆಯಲಿದೆ. ಸಂಪ್ರದಾಯದಂತೆ ಬಾಕ್ಸಿಂಗ್‌ ಡೇ ಟೆಸ್ಟ್‌ ಹಾಗೂ ನ್ಯೂ ಇಯರ್‌ ಟೆಸ್ಟ್‌ ಪಂದ್ಯಗಳ ಆತಿಥ್ಯ ಮೆಲ್ಬರ್ನ್ ಮತ್ತು ಸಿಡ್ನಿ ಪಾಲಾಗಿದೆ. 2020-21ರ ಭಾರತ ಪ್ರವಾಸದ ವೇಳೆ ಪರ್ತ್‌ಗೆ ಟೆಸ್ಟ್‌ ಆತಿಥ್ಯ ನೀಡದಿದ್ದುದು ಅಚ್ಚರಿಗೆ ಕಾರಣವಾಗಿತ್ತು.

ಹೀಗಾಗಿ ಈ ಬಾರಿ ಪರ್ತ್‌ಗೆ ಮೊದಲ ಆದ್ಯತೆ ನೀಡಿರುವ ಸಾಧ್ಯತೆ ಇದೆ.

ಆದರೆ “ಕ್ರಿಕೆಟ್‌ ಆಸ್ಟ್ರೇಲಿಯ’ ಈ ವೇಳಾಪಟ್ಟಿಯನ್ನಿನ್ನೂ ಅಧಿಕೃತಗೊಳಿ ಸಿಲ್ಲ. ಈ ತಿಂಗಳ ಅಂತ್ಯದೊಳಗೆ ಪ್ರಕಟ ಗೊಳ್ಳಲಿದೆ ಎಂದು ವರದಿಯಾಗಿದೆ. ಟೆಸ್ಟ್‌ ಸರಣಿ ನವೆಂಬರ್‌ ಕೊನೆಯ ವಾರ ಆರಂಭವಾಗುವ ನಿರೀಕ್ಷೆ ಇದೆ.
ಭಾರತ 1991-92ರ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಅಂದು ಆಸ್ಟ್ರೇಲಿಯ 4-0 ಅಂತರದ ಗೆಲುವು ಸಾಧಿಸಿತ್ತು.

ಭಾರತಕ್ಕೆ ಸತತ 4 ಸರಣಿ
ಇತ್ತಂಡಗಳ ನಡುವೆ ನಡೆದ ಕಳೆದ 4 ಸರಣಿಗಳಲ್ಲಿ ಭಾರತವೇ ಗೆದ್ದು ಬಂದಿರುವುದು ವಿಶೇಷ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next