Advertisement
ಹೌದು, ಕೋವಿಡ್ ಸೋಂಕಿನ ರೂಪಾಂತರಿ ಅಲೆಯ ಸಂದರ್ಭದಲ್ಲಿ ದೇಶದ ಪ್ರತಿಷ್ಠಿತ ಅಗ್ರಮಾನ್ಯ ದೈತ್ಯ ನಾಲ್ಕು ಐಟಿ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಹಾಗೂ ಹೆಚ್ ಸಿ ಎಲ್ ಕಂಪನಿಗಳು ಈ ವರ್ಷ 1 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿರುವುದಾಗಿ ಒಂದು ವರದಿ ತಿಳಿಸಿದೆ.
Related Articles
Advertisement
ಇನ್ನು, ಸುದ್ದಿ ಸಂಸ್ಥೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಉದ್ಯಮ ಕ್ಷೇತ್ರದ ವೀಕ್ಷಕರು ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಅನೇಕ ಕಂಪನಿಗಳು ಡಿಸೆಂಬರ್ 2021ರವರೆಗೂ ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಮ್)ಮಾಡಲು ನೀಡಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಕ್ಲೈಂಟ್ ಜಿಯೋಗ್ರಾಫಿಸ್ ಐಟಿ ಕಂಪನಿಯಲ್ಲೂ ನೇಮಕ ಏರಿಕೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದ್ದಾರೆ.
ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಬಿ. ಪ್ರವೀಣ್ ರಾವ್ ಪ್ರತಿಕ್ರಿಯಿಸಿ, ಐಟಿ ಕಂಪನಿಗಳ ನಾಲ್ಕನೇ ತ್ರೈಮಾಸಿಕ ವಿಶ್ಲೇಷಣೆ ಪ್ರಕಾರ, 2021ರ ಹಣಕಾಸು ವರ್ಷದಲ್ಲಿ ನೌಕರರ ನಿವ್ವಳ ಸೇರ್ಪಡೆ ಕಳೆದ ಹಣಕಾಸು ವರ್ಷದಲ್ಲಿದ್ದ 49 ಸಾವಿರದಿಂದ 73 ಸಾವಿರಕ್ಕೆ ಹೆಚ್ಚಾಗಿದೆ. ದೇಶ ಹಾಗೂ ಹೊರದೇಶಗಳಲ್ಲಿ 26 ಸಾವಿರ ನೌಕರರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಟಿಸಿಎಸ್ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಂದ್ ಪ್ರತಿಕ್ರಿಯಿಸಿ, 2022ರ ಹಣಕಾಸು ವರ್ಷದಲ್ಲಿ ಸಂಸ್ಥೆ ಸುಮಾರು 40 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಯೋಜನೆಯಲ್ಲಿ ಇದೆ ಎಂದು ತಿಳಿಸಿದ್ದಾರೆ.
ಥಿಯೆರಿ ಡೆಲಾಪೋರ್ಟೆ ವಿಪ್ರೋದ ಸಿಇಒ ಆದ ನಂತರ ಪ್ರಸ್ತಕ ಹಣಕಾಸು ವರ್ಷದಲ್ಲಿ ಹೊಸದಾಗಿ 10 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ.ಈ ವರ್ಷದ 15 ಸಾವಿರ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ನೊಯ್ಡಾ ಮೂಲದ ಹೆಚ್ ಸಿಎಲ್ ಕಂಪನಿ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಓದಿ : ಬೆಡ್ ಬ್ಲಾಕಿಂಗ್ ಪ್ರಕರಣ: ಇಬ್ಬರು ವೈದ್ಯರು ಸೇರಿ ಎಂಟು ಮಂದಿ ಸಿಸಿಬಿ ವಶಕ್ಕೆ