Advertisement

Aditya-L1: ಭೂಮಿ ಮತ್ತು ಚಂದ್ರನ ಜೊತೆ ಸೆಲ್ಫಿ ಫೋಟೋ ರವಾನಿಸಿದ ಆದಿತ್ಯ ಎಲ್‌ 1

03:28 PM Sep 07, 2023 | Team Udayavani |

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್‌ 1 ವ್ಯೂಮನೌಕೆಯು ಲ್ಯಾಗ್ರೇಂಜ್‌ ಪಾಯಿಂಟ್‌ (ಎಲ್‌ 1) ನತ್ತ ತೆರಳುತ್ತಿರುವ ಸಂದರ್ಭದಲ್ಲಿ ಗುರುವಾರ (ಸೆಪ್ಟೆಂಬರ್‌ 07) ಭೂಮಿ ಮತ್ತು ಚಂದ್ರನ ಜತೆ ಸೆಲ್ಫಿ ಫೋಟೋವನ್ನು ಕ್ಲಿಕ್ಕಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Janmashtamiಗೆ 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ: ಮಂಗಳೂರು ಮೂಲದ ವೈದ್ಯರ ಟ್ವೀಟ್‌ ವೈರಲ್

ಆದಿತ್ಯ ಎಲ್‌ 1 ಕ್ಲಿಕ್ಕಿಸಿರುವ ಸೆಲ್ಫಿ ಫೋಟೊಗಳನ್ನು ಇಸ್ರೋ (ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಶನ್)‌ ಟ್ವೀಟರ್‌ ನಲ್ಲಿ ಶೇರ್‌ ಮಾಡಿದೆ.

ಆದಿತ್ಯ ಎಲ್‌ 1 ನಿಗದಿತ ಕಕ್ಷೆಗೆ ಸೇರಿದ ನಂತರ ಪ್ರತಿದಿನ ಅಂದಾಜು 1,440 ಫೋಟೋಗಳನ್ನು ಗ್ರೌಂಡ್‌ ಸ್ಟೇಷನ್‌ ಗೆ ಕಳುಹಿಸಲಿದ್ದು, ಇದರಿಂದ ಸೌರಯಾನದ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದು ವರದಿ ತಿಳಿಸಿದೆ.

Advertisement

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸೆಪ್ಟೆಂಬರ್‌ 2ರಂದು ಆದಿತ್ಯ ಎಲ್‌ 1 ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ನಂತರ ಆದಿತ್ಯ ಎಲ್‌ 1 ವ್ಯೂಮ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯವನ್ನು ಎರಡನೇ ಬಾರಿ ಯಶಸ್ವಿಯಾಗಿ ನಡೆಸಲಾಗಿತ್ತು. ಇನ್ನು ಮುಂದಿನ ಕಕ್ಷೆ ಎತ್ತರಿಸುವ ಕಾರ್ಯ ಸೆಪ್ಟೆಂಬರ್‌ 10ರ ನಸುಕಿನ 2.30ಕ್ಕೆ ನಡೆಯಲಿದೆ.

ಏನಿದು Lagrangian Point:

ಲ್ಯಾಗ್ರೇಂಜ್‌ ಪಾಯಿಂಟ್‌ ಭೂಮಿಯಿಂದ 1.5 ಮಿಲಿಯನ್‌ ಕಿಲೋ ಮೀಟರ್‌ ದೂರದಲ್ಲಿದೆ. ಈ ಪಾಯಿಂಟ್‌ ಸೂರ್ಯ ಮತ್ತು ಭೂಮಿ ನಡುವಿನ ಬಿಂದುವಾಗಿದೆ. ಭಾರತದ ಬಾಹ್ಯಾಕಾಶ ನೌಕೆ ಆದಿತ್ಯ ಎಲ್‌ 1 ಲ್ಯಾಗ್ರೇಂಜ್‌ ಪಾಯಿಂಟ್‌ ಗಮ್ಯ ಸ್ಥಾನ ತಲುಪಬೇಕಾಗಿದೆ. ಈ ಪಾಯಿಂಟ್‌ ತಲುಪಲು ಆದಿತ್ಯ ಎಲ್‌ 1 ಸುಮಾರು 15,00,000 ಲಕ್ಷ ಕಿಲೋ ಮೀಟರ್‌ ದೂರ ಕ್ರಮಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next