Advertisement

T20 World Cup: ಎಪ್ರಿಲ್‌ ಕೊನೇ ವಾರ ಭಾರತ ತಂಡದ ಆಯ್ಕೆ

11:13 PM Mar 30, 2024 | Team Udayavani |

ಹೊಸದಿಲ್ಲಿ: ಟಿ20 ವಿಶ್ವಕಪ್‌ ಪಂದ್ಯಾವಳಿಗಾಗಿ ಭಾರತದ 15 ಸದಸ್ಯರ ತಂಡ ಎಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಬಿಸಿಸಿಐ ಮೂಲವೊಂದು ತಿಳಿಸಿದೆ.

Advertisement

ಮೇ ಒಂದಕ್ಕೆ ಎಲ್ಲ ರಾಷ್ಟ್ರಗಳು ತಮ್ಮ ತಂಡಗಳ ಯಾದಿಯನ್ನು ಐಸಿಸಿಗೆ ಸಲ್ಲಿಸಬೇಕಿದೆ. ಹೀಗಾಗಿ ಎಪ್ರಿಲ್‌ ಅಂತಿಮ ವಾರ ಟೀಮ್‌ ಇಂಡಿಯಾದ ಆಯ್ಕೆ ನಡೆಯುವ ಸಾಧ್ಯತೆ ಹೆಚ್ಚು. ಆಗ ಐಪಿಎಲ್‌ ಪಂದ್ಯಾವಳಿ ಕೂಡ ಒಂದು ಹಂತ ತಲುಪಲಿದ್ದು, ಮಿಂಚಿದ ಆಟಗಾರರನ್ನು ಆಯ್ಕೆಗೆ ಪರಿಗಣಿಸುವುದು ಬಿಸಿಸಿಐ ಯೋಜನೆ.

ಮೇ 19ಕ್ಕೆ ಐಪಿಎಲ್‌ ಲೀಗ್‌ ಹಂತದ ಸ್ಪರ್ಧೆ ಮುಗಿಯಲಿದ್ದು, ಕೂಡಲೇ ಆಟಗಾರರ ಒಂದು “ಬ್ಯಾಚ್‌’ ನ್ಯೂಯಾರ್ಕ್‌ಗೆ ಪಯಣಿಸಲಿದೆ. ಇದರಲ್ಲಿ ಪ್ಲೇ ಆಫ್ ಪ್ರವೇಶಿಸದ ಐಪಿಎಲ್‌ ತಂಡಗಳಿಂದ ಭಾರತ ತಂಡಕ್ಕೆ ಆಯ್ಕೆಯಾದ ಆಟಗಾರರಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next