Advertisement

‘ಕೌಟಿಲ್ಯ’ಕಣ್ಣಿಗೆ ಬಿದ್ದ ಚೀನ! ; ಭಾರತದ ಗುಪ್ತಚರ ಉಪಗ್ರಹದ ವೀಕ್ಷಣೆಯಿಂದ ದೃಢ

03:36 AM Jul 27, 2020 | Hari Prasad |

ಹೊಸದಿಲ್ಲಿ: ಭಾರತೀಯ ಗುಪ್ತಚರ ಉಪಗ್ರಹವಾದ ಎಮಿಸ್ಯಾಟ್‌, ಟಿಬೆಟ್‌ನ ಉತ್ತರದ ಭಾಗದ ಪರಿವೀಕ್ಷಣೆ ನಡೆಸಿದ್ದು, ಅದರಲ್ಲಿ ಲಡಾಖ್‌ನ ಕೆಲವು ಭಾಗಗಳಲ್ಲಿ ಚೀನ ಇನ್ನೂ ತನ್ನ ಸೇನೆಯ ಜಮಾವಣೆಯನ್ನು ಮುಂದುವರಿಸಿರುವುದು ತಿಳಿದುಬಂದಿದೆ.

Advertisement

ಶನಿವಾರದಂದು ಈ ಉಪಗ್ರಹ, ಭಾರತ-ಚೀನ ಗಡಿ ರೇಖೆ, ಟಿಬೆಟ್‌, ಅರುಣಾಚಲ ಪ್ರದೇಶಗಳ ಗಡಿ ಭಾಗಗಳನ್ನು ಪರಿವೀಕ್ಷಣೆ ನಡೆಸಿದೆ.

ಅದರಲ್ಲಿ, ಪಾಂಗೊಂಗ್‌ ತ್ಸೋ ಸರೋವರದ ಫಿಂಗರ್‌ 4 ಪ್ರಾಂತ್ಯದಲ್ಲಿ ಚೀನ ಸೇನೆ ಇನ್ನೂ ತನ್ನ ಇರುವಿಕೆಯನ್ನು ಮುಂದುವರಿಸಿರುವುದನ್ನು ಉಪಗ್ರಹದಲ್ಲಿರುವ ಎಮಿಸ್ಯಾಟ್‌ನಲ್ಲಿರುವ ‘ಕೌಟಿಲ್ಯ’ ಎಂಬ ಎಲೆಕ್ಟ್ರಾನಿಕ್‌ ಇಂಟಲಿಜೆನ್ಸ್‌ ವ್ಯವಸ್ಥೆ ಪತ್ತೆಹಚ್ಚಿದೆ.

ಲಡಾಖ್‌ನಲ್ಲಿ ಎದ್ದಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಉಭಯ ದೇಶಗಳ ಸೇನಾಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿ ಕಳೆದ ಹಲವಾರು ದಿನಗಳಿಂದ ಪರಸ್ಪರ ಮಾತುಕತೆಯಲ್ಲಿ ನಿರತರಾಗಿದ್ದಾರೆ.
ಅದರ ಫ‌ಲವಾಗಿ, ಗಡಿರೇಖೆಯಿಂದ ಚೀನ ಸೇನೆಯು ಕ್ರಮೇಣ ಹಿಂದಕ್ಕೆ ಸರಿಯುತ್ತಿದೆ ಎಂಬ ಮಾತುಗಳು ವರದಿಗಳು ತೇಲಿಬಂದಿದ್ದವು. ಆದರೆ, ಉಪಗ್ರಹದ ಹೊಸ ವರದಿಯು, ಚೀನ ಸೇನೆ ಇನ್ನೂ ಸಂಪೂರ್ಣವಾಗಿ ಗಡಿಯಿಂದ ಕಾಲ್ತೆಗೆದಿಲ್ಲ ಎಂಬುದು ಸಾಬೀತಾದಂತಾಗಿದೆ.

ಅಮೆರಿಕಕ್ಕೆ ಚೀನ ಸವಾಲು
ಮತ್ತೂಂದೆಡೆ, ಅಮೆರಿಕಕ್ಕೆ ಸೆಡ್ಡು ಹೊಡೆದಿರುವ ಚೀನ, ದಕ್ಷಿಣ ಚೀನ ಸಮುದ್ರದಲ್ಲಿ ಚೀನ ಪ್ರವೇಶದ ಮಹಾದ್ವಾರ ಎಂದೇ ಪರಿಗಣಿಸಲ್ಪಡುವ ಲೆಯ್ಝು ಭೂಶಿರದ ಗುವಾಂಡೊಂಗ್‌ ಪ್ರಾಂತ್ಯದಲ್ಲಿ ಸೇನಾ ಕವಾಯತು ಆರಂಭಿಸಿದೆ. ಇತ್ತೀಚೆಗೆ, ದಕ್ಷಿಣ ಚೀನ ಸಮುದ್ರದಲ್ಲಿ ಸೇನಾ ಕವಾಯತು ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಅಮೆರಿಕ, ಚೀನಕ್ಕೆ ಎಚ್ಚರಿಕೆ ಕೊಟ್ಟಿತ್ತು. ಅದರ ಬೆನ್ನಿಗೇ, ಚೀನ ಹೀಗೆ ಪ್ರತಿ ಸವಾಲು ಹಾಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next