Advertisement
ಈ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಇತ್ತೀಚೆಗೆ ರಾಜ್ಯಸಭೆಗೆ ನೀಡಿದ್ದ ಮಾಹಿತಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯ ಅಧ್ಯಕ್ಷ ಕೆ.ಶಿವನ್ ಕೂಡ 2019ರಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದುಂಟು. ಅವರು ಹೇಳಿದ್ದಂತೆ ನಮ್ಮ ವಿಜ್ಞಾನಿಗಳು ನಿರ್ಮಿಸಲಿರುವ ಬಾಹ್ಯಾಕಾಶ ಕೇಂದ್ರ 20 ಟನ್ ತೂಕ ಹೊಂದಿರಲಿದೆ.
Related Articles
Advertisement
ಭೂಮಿಯಿಂದ ಸುಮಾರು 370-460 ಕಿ.ಮೀ ದೂರದ ಕಕ್ಷೆಯಲ್ಲಿ ಈ ನಿಲ್ದಾಣ ತಿರುಗುತ್ತಿರುತ್ತದೆ. ಬಹುರಾಷ್ಟ್ರಗಳ ಗಗನಯಾತ್ರಿಗಳು ಹಲವು ಬಾರಿ ಬಾಹ್ಯಾಕಾಶಕ್ಕೆ ತೆರಳಿ, ಅಲ್ಲಿ ನಿಲ್ದಾಣ ನಿರ್ಮಿಸಿದ್ದಾ ರೆ. ಸುಮಾರು ಒಂದು ಫುಟ್ಬಾಲ್ ಕ್ರೀಡಾಂಗಣದಷ್ಟು ದೊಡ್ಡದಾಗಿ ನಿರ್ಮಿಸ ಲಾಗಿರುವ ಈ ನಿಲ್ದಾಣದಲ್ಲಿ ಅನೇಕ ರೀತಿಯ ಪ್ರಯೋಗ ಗಳನ್ನು ನಡೆಸಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣವು 92.68 ನಿಮಿಷದಲ್ಲಿ ಪೂರ್ತಿ ಭೂಮಿಯನ್ನು ಒಂದು ಸುತ್ತು ಸುತ್ತುತ್ತದೆ. ಇದರ ವೇಗ ಗಂಟೆಗೆ 28 ಸಾವಿರ ಕಿಲೋ ಮೀಟರ್. ಅಮೆರಿಕವು ತನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ವ್ಯಾವಹಾರಿಕಗೊಳಿಸಿದ್ದು, ಖಾಸಗಿ ಗಗನಯಾತ್ರಿಗಳಿಗೂ ನೀಡಿದೆ.
ಬೆರಳೆಣಿಕೆಯ ರಾಷ್ಟ್ರಗಳು
ಬಾಹ್ಯಾಕಾಶ ಕೇಂದ್ರ ಸ್ಥಾಪನೆ ಮಾಡಿರುವ ರಾಷ್ಟ್ರಗಳ ಸಂಖ್ಯೆ ಜಗತ್ತಿನಲ್ಲಿ ಬೆರಳೆಣಿಕೆಯಲ್ಲಿ ಇವೆ. ಕೆನಡಾ, ಜಪಾನ್, ರಷ್ಯಾ, ಅಮೆರಿಕ ಸೇರಿಕೊಂಡು ಒಂದು ಬಾಹ್ಯಾ ಕಾಶ ನಿಲ್ದಾಣ ಸ್ಥಾಪನೆ ಮಾಡಿಕೊಂಡಿವೆ. ಐರೋಪ್ಯ ಒಕ್ಕೂಟದ ಒಕ್ಕೂಟದ ಹನ್ನೊಂದು ರಾಷ್ಟ್ರಗಳಾಗಿರುವ ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಟೆಲಿ, ನೆದರ್ಲೆಂಡ್, ನಾರ್ವೆ, ಸ್ಪೇನ್, ಸ್ವೀಡನ್, ಸ್ವಿಜರ್ಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ ಈ ನಿಟ್ಟಿನಲ್ಲಿ ಕೈಜೋಡಿಸಿವೆ.