Advertisement

ವಿಶ್ವಕಪ್‌ ಪವರ್‌ಲಿಫ್ಟಿಂಗ್‌: ರಾಜ್ಯದ ಗುರು-ಶಿಷ್ಯೆಗೆ ಪದಕ

06:35 AM Feb 19, 2018 | Team Udayavani |

ಬೆಂಗಳೂರು: ಒಂಭತ್ತನೇ ವಿಶ್ವಕಪ್‌ ಪ್ಯಾರಾ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಗುರು -ಶಿಷ್ಯೆ ಬೆಳ್ಳಿ ಪದಕ ಗೆದ್ದಿದ್ದಾರೆ.

Advertisement

ಬೆಂಗಳೂರಿನ ಪವರ್‌ಲಿಫ್ಟರ್‌ ಫ‌ರ್ಮಾನ್‌ ಬಾಷಾ ಹಾಗೂ ಅವರ ಶಿಷ್ಯೆ ಸಕೀನಾ ಖಾತುನ್‌ ಪದಕ ಗೆದ್ದವರಾಗಿದ್ದಾರೆ. ಫ‌ರ್ಮಾನ್‌ ಬಾಷಾ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿ ಎರಡು ಸಲ ನಾಲ್ಕನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ಕೂದಲೆಳೆಯ ಅಂತರದಲ್ಲಿ ಅವರು ಪದಕ ಕಳೆದುಕೊಂಡಿದ್ದರು.

ಶಕೀನಾಗೆ ಬೆಳ್ಳಿ: ಗುರುವಿಗೆ ತಕ್ಕೆ ಶಿಷ್ಯೆ ಎನ್ನುವುದನ್ನು ಸಕೀನಾ ಸಾಬೀತುಪಡಿಸಿದ್ದಾರೆ. ಅವರು ಕೂಡ ಬೆಳ್ಳಿ ಪದಕ ಗೆದ್ದಿದ್ದಾರೆ. ಇತ್ತೀಚೆಗೆ ಶಕೀನಾಗೆ ಮುಂದಿನ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿತ್ತು. ಇದರಿಂದ ತೀವ್ರವಾಗಿ ನೊಂದ ಸಕೀನಾ ತನಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ನಾನು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next